rtgh

ಅಕ್ಕಿ ಬೆಲೆಯಲ್ಲಿ ಗಣನೀಯ ಇಳಿಕೆ.! ಕೇಂದ್ರ ಸರ್ಕಾರದಿಂದ ಹೊಸ ಬೆಲೆ ನಿಗದಿ

ಹಲೋ ಸ್ನೇಹಿತರೇ, ಹಣದುಬ್ಬರದಿಂದ ಜನ ಸಾಮಾನ್ಯರಿಗೆ ಮುಕ್ತಿಯನ್ನು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಭರ್ಜರಿ ಘೋಷಣೆಯನ್ನು ಮಾಡಿದೆ. ಸರ್ಕಾರ ಇದೀಗ  ಭಾರತ್ ಬ್ರ್ಯಾಂಡ್ ಅಡಿಯಲ್ಲಿ ಅಗ್ಗದ ಬೆಲೆಯಲ್ಲಿ ಕಾಳುಗಳು ಮತ್ತು ಹಿಟ್ಟುನ್ನು ಒದಗಿಸಿದ ನಂತರ ಇದೀಗ ಕಡಿಮೆ ಬೆಲೆಯಲ್ಲಿ ಅಕ್ಕಿಯನ್ನು ಮಾರಾಟ ಮಾಡಲು ನಿರ್ಧರವನ್ನು ಮಾಡಿದೆ. ಕಡಿಮೆ ಅಂದರೆ ಎಷ್ಟು ಬೆಲೆ ಎಂಬುದನ್ನು ಲೇಖನದಲ್ಲಿ ತಿಳಿಯಿರಿ.

bharath rice

ಭಾರತ್ ಅಟ್ಟ & ಭಾರತ್ ದಾಲ್ ನಂತರ ಈಗ ಕೇಂದ್ರ ಸರ್ಕಾರ ಭಾರತ್ ರೈಸ್ ಅನ್ನು ಮಾರಾಟ ಮಾಡಲು ಮುಂದಾಗಿದೆ. ಈ ಮೂಲಕ ಕೇವಲ 25 ರೂ.ಗೆ ಒಂದು ಕೆಜಿ ಅಕ್ಕಿಯನ್ನು ಮಾರಾಟ ಮಾಡಲು ಮುಂದಾಗಿದೆ.  

ಕೆ.ಜಿ ಅಕ್ಕಿಗೆ 25 ರೂ. :  
ವರದಿಯ ಪ್ರಕಾರ ಭಾರತ ಸರ್ಕಾರವು NAFED, NCCF & ಕೇಂದ್ರೀಯ ಭಂಡಾರ್ ಮೂಲಕ ಅಗ್ಗದ ದರದಲ್ಲಿ ಅಕ್ಕಿಯನ್ನು ಮಾರಾಟ ಮಾಡುತ್ತದೆ. ಜನರು ಕೆಜಿಗೆ 25 ರೂ. ನೀಡುವ ಮೂಲಕ ‘ಭಾರತ್ ರೈಸ್’ ಅನ್ನು ಖರೀದಿಸಬಹುದು. ಕೆಲ ದಿನಗಳಿಂದ ಅಕ್ಕಿ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದು ಗಮನಾರ್ಹವಾಗಿದೆ. ಈ ವರ್ಷ ಅಕ್ಕಿ ಬೆಲೆಯಲ್ಲಿ  ಶೇ.14.1 ರಷ್ಟು ಏರಿಕೆಯನ್ನು ಕಂಡಿದೆ. ಸಾಮಾನ್ಯ ನಾನ್ ಬ್ರಾಂಡೆಡ್ ಅಕ್ಕಿಯ ಬೆಲೆ kgಗೆ ಸರಾಸರಿ 43.3 ರೂ.ಗೆ ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ ಅಕ್ಕಿ ಬೆಲೆ ಹೆಚ್ಚಳವನ್ನು ನಿಯಂತ್ರಿಸಲು ಸರ್ಕಾರವು ಭಾರತ್ ಬ್ರಾಂಡ್ ಅಡಿಯಲ್ಲಿ ಅಗ್ಗದ ಬೆಲೆಯಲ್ಲಿ ಅಕ್ಕಿಯನ್ನು ಮಾರಾಟ ಮಾಡಲು ನಿರ್ಧರ ಮಾಡಿದೆ.   

ಭಾರತ್ ಹಿಟ್ಟು ಮತ್ತು ಬೇಳೆಕಾಳುಗಳ ಮಾರಾಟ  : 
ಸರ್ಕಾರವು ಭಾರತ್ ಬ್ರ್ಯಾಂಡ್ ಅಡಿಯಲ್ಲಿ ಅಗ್ಗದ ದರಕ್ಕೆ ಹಿಟ್ಟು, ಬೇಳೆಕಾಳುಗಳು, ಈರುಳ್ಳಿ ಮತ್ತು ಟೊಮೆಟೊ ಮಾರಾಟ ಮಾಡಿದೆ. ನವೆಂಬರ್ 6, 2023 ರಂದು ಕೇಂದ್ರ ಸರ್ಕಾರ ಭಾರತ್ ಅಟ್ಟಾವನ್ನು ಪ್ರಾರಂಭಿಸಿತ್ತು. ಇದರಲ್ಲಿ ಜನರು kgಗೆ 27.50 ರೂ ದರದಲ್ಲಿ ಹಿಟ್ಟನ್ನು ಖರೀದಿಸಬಹುದು. ಮಾರುಕಟ್ಟೆಯಲ್ಲಿ ಹಿಟ್ಟಿನ ಸರಾಸರಿ ಬೆಲೆ ಕೆಜಿಗೆ 35 ರೂ. ಆದರೆ  ಭಾರತ್  ಶಾಪ್ ಮೂಲಕ ಒಂದು kgಗೆ  27.50 ರೂ.ಯಂತೆ ಹಿಟ್ಟನ್ನು ಖರೀದಿಸಬಹುದು. ಅದೇ ರೀತಿ ಸರ್ಕಾರ ಭಾರತ್ ದಾಲ್ kgಗೆ 60 ರೂ.ಅಂತೆ ಮಾರಾಟ ಮಾಡುತ್ತಿದೆ. ಈ ಹಿಂದೆ ಈರುಳ್ಳಿ, ಟೊಮೇಟೊ ಬೆಲೆ ಗಗನಕ್ಕೇರಿದ ಸಂದರ್ಭದಲ್ಲಿ ಸರ್ಕಾರ ಮಾರುಕಟ್ಟೆಗಿಂತ ಕಡಿಮೆ ಬೆಲೆಗೆ ಈರುಳ್ಳಿ, ಟೊಮೇಟೊ ಕೂಡಾ ಜನರಿಗೆ ಮಾರಾಟವನ್ನು ಮಾಡಿದೆ. ನವೆಂಬರ್ನಲ್ಲಿ ಆಹಾರ ಹಣದುಬ್ಬರ ದರ ಶೇ.8.70ಕ್ಕೆ ತಲುಪಿರುವುದು ಗಮನಾರ್ಹವಾಗಿದೆ. ಆದರೆ ಚಿಲ್ಲರೆ ಹಣದುಬ್ಬರ ದರವು 5.55% ನ್ನು ತಲುಪಿದೆ.

ಧರೆಗುರುಳಿದ ಎಲ್‌ಪಿಜಿ ಗ್ಯಾಸ್‌ ಬೆಲೆ.!! ಹಾಗಾದ್ರೆ ಇಂದಿನ ದರ ಎಷ್ಟು? ಸತ್ಯ ಬಟಾಬಯಲು


ಪ್ರತಿದಿನ 10,000 ಸಾವಿರ ಸಂಪಾದಿಸಿ ಕೇವಲ 850 ರೂ ನಿಂದ ಆರಂಭಿಸಿ : ಕಡಿಮೆ ಬಂಡವಾಳ ಹೆಚ್ಚು ಲಾಭ

Leave a Comment