ಹಲೋ ಸ್ನೇಹಿತರೇ, ಯುವನಿಧಿ ಯೋಜನೆಗೆ ಬರೊಬ್ಬರಿ 6062 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಪದವಿ & ಡಿಪ್ಲೊಮಾ ಅರ್ಹ ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ ಯಾವುದೇ ಅಡಚಣೆ ಇಲ್ಲದೆ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಕೈಗಾರಿಕಾ ತರಬೇತಿ ಹಾಗೂ ಉದ್ಯೋಗ ಇಲಾಖೆ ತಿಳಿಸಿದೆ. ಇನ್ನು ಅರ್ಜಿ ಸಲ್ಲಿಸದವರು ಹೇಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಯಿರಿ.
ಬೆಂಗಳೂರು, ಡಿ.28 ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಯುವನಿಧಿ ಯೋಜನೆ ನೋಂದಣಿ ಪ್ರಕ್ರಿಯೆ ಡಿ.26 ರಂದು ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ಇಂದಿನವರೆಗೆ ಯುವನಿಧಿ ಯೋಜನೆಗೆ ಬರೊಬ್ಬರಿ 6062 ಅರ್ಹ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಪದವಿ ಹಾಗೂ ಡಿಪ್ಲೊಮಾ ಅರ್ಹ ಫಲಾನುಭವಿಗಳು ಸೇವಾಸಿಂಧು ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು?
ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು 2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪದವಿಯನ್ನು ಪಡೆದಿರಬೇಕು. ಅದೇ ಶೈಕ್ಷಣಿಕ ವರ್ಷದಲ್ಲಿ ಪದವಿ ಪಡೆದು 6 ತಿಂಗಳನ್ನು ಪೂರೈಸಿರಬೇಕಾಗುತ್ತದೆ. ಉನ್ನತ ಶಿಕ್ಷಣ ವ್ಯಾಸಂಗಕ್ಕೆ ಸೇರಿದವರು ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ಯಾವುದೇ ಉದ್ಯೋಗಕ್ಕೆ ಸೇರದೆ ಇರುವವರು ಇದಕ್ಕೆ ಹೆಚ್ಚಿನ ಅರ್ಹತೆ ಪಡೆದಿರುತ್ತಾರೆ. ಪದವಿ ಮತ್ತು ಡಿಪ್ಲೋಮಾ ತೇರ್ಗಡೆ ಆದವರಿಗೆ ಮಾತ್ರ ಇಲ್ಲಿ ಅವಕಾಶವಿರುತ್ತದೆ.
ಇನ್ನು ನಿರುದ್ಯೋಗಿ ಪದವೀಧರರಿಗೆ ಮಾಸಿಕ 3,000 ಆರ್ಥಿಕ ನೆರವು ಹಾಗೂ ಡಿಪ್ಲೋಮಾ ಪೂರೈಸಿದವರಿಗೆ ಮಾಸಿಕ 1,500 ಆರ್ಥಿಕ ನೆರವು ಸಿಗುತ್ತದೆ. ಯುವನಿಧಿ ಯೋಜನೆಗೆ ಪ್ರಸಕ್ತ ವರ್ಷದಲ್ಲಿ 250 ಕೋಟಿ ರೂ. ಹಾಗೂ ಮುಂದಿನ ವರ್ಷಕ್ಕೆ 1,250 ಕೋಟಿ ರೂ. ವೆಚ್ಚ ತಗುಲಲಿದೆ. ಬೆಂಗಳೂರು ಒನ್, ಕರ್ನಾಟಕ ಒನ್, ಸೇವಾಸಿಂಧು ಪೋರ್ಟ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು.
ಇತರೆ ವಿಷಯಗಳು
ವಿದ್ಯಾರ್ಥಿಗಳೇ ಗಮನಿಸಿ; ವಾರ್ಷಿಕ ಭತ್ಯೆ 20 ಲಕ್ಷ.! ಈ ವಿದ್ಯಾರ್ಥಿಗಳಿಗಾಗಿ ವಿಶೇಷ ವಿದ್ಯಾರ್ಥಿವೇತನ
ಅಕ್ಕಿ ಬೆಲೆಯಲ್ಲಿ ಗಣನೀಯ ಇಳಿಕೆ.! ಕೇಂದ್ರ ಸರ್ಕಾರದಿಂದ ಹೊಸ ಬೆಲೆ ನಿಗದಿ