rtgh

ಇನ್ಮುಂದೆ ಕುಡುಕರದ್ದೇ ಆದ ಸಂಘ ಸ್ಥಾಪನೆ.!! ರಾಜ್ಯದಲ್ಲಿ ಹೊಸ ಹವಾ ಆರಂಭ; ನೀವೂ ರಿಜಿಸ್ಟರ್‌ ಆದ್ರಾ??

ಹಲೋ ಸ್ನೇಹಿತರೇ, ಕೆಲವು ದಿನಗಳಿಂದ ಕುಡುಕರ ವಿಚಾರ ಕರ್ನಾಟಕದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಕುಡುಕರ ಸಂಘದ ಬಗ್ಗೆ ವಿಪರೀತ ಕುತೂಹಲ ಜನರಲ್ಲಿ ಬೆಳೆದಿದೆ. ಹೀಗಿದ್ದಾಗ, ‘ಅಖಿಲ ಕರ್ನಾಟಕ ಕುಡುಕರ ಸಂಘ’ದ ರಿಜಿಸ್ಟ್ರೇಷನ್ ಅಂದ್ರೆ ನೋಂದಣಿ ಪ್ರಕ್ರಿಯೆಯೂ ಶುರುವಾಗಿದೆ ಅಂತೆ.

Establishment of drunkards association

ಹಾಗಾದರೆ ನೀವು ಈ ಸಂಘಕ್ಕೆ ನೋಂದಣಿ ಮಾಡಿಸಿದ್ದೀರಾ? ಇದೀಗ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿರುವ ಕುಡುಕರ ಸಂಘದ ಅಪ್ಲಿಕೇಷನ್ ಏನನ್ನ ಹೇಳುತ್ತಿದೆ?

ಕುಡುಕರು ಕೆಲವು ದಿನಗಳಿಂದ ಹಲವು ಬೇಡಿಕೆ ಇಡುತ್ತಾ ಬಂದಿದ್ದಾರೆ. ಅದರಲ್ಲಿಯೂ ಇತ್ತೀಚೆಗೆ ಕುಡುಕರ ಸಂಘದ ಡಿಮ್ಯಾಂಡ್ ಫುಲ್ ವೈರಲ್ ಆಗಿದೆ. ಹಾಗೇ ಸಚಿವರು ಕೂಡ ಕುಡುಕರ ಸಂಘದ ಬೇಡಿಕೆಗಳನ್ನ ನೋಡಿ ಬೆಚ್ಚಿಬಿದ್ದಿದ್ದರು. ಇಷ್ಟು ಸಾಲದು ಎಂದು ಹೊಸದಾಗಿ ಕುಡುಕರ ಸಂಘದ ಅಪ್ಲಿಕೇಷನ್ ಮತ್ತು ಅರ್ಥಾತ್ ಅರ್ಜಿ ಒಂದು ವೈರಲ್ ಆಗುತ್ತಿದೆ. ಕುಡುಕರ ಸಂಘಕ್ಕೆ ಸೇರಲು ಈ ಮೂಲಕ ಆಹ್ವಾನ ನೀಡಲಾಗಿದೆ ಎಂಬ ವದಂತಿ ದಟ್ಟವಾಗಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿದೆ. ಹಾಗಾದ್ರೆ ‘ಅಖಿಲ ಕರ್ನಾಟಕ ಕುಡುಕರ ಸಂಘ’ ಅರ್ಜಿ ಹೇಗಿದೆ? ಮುಂದೆ ಓದಿ.

ಕುಡುಕರ ಸಂಘಕ್ಕೆ ಸೇರಲು ಏನು ಮಾಡಬೇಕು?

‘ಅಖಿಲ ಕರ್ನಾಟಕ ಕುಡುಕರ ಸಂಘ’ ಎಂದು ಮೇಲೆ ದೊಡ್ಡದಾಗಿ ಬರೆಯಲಾಗಿದೆ. ಅದರಡಿ, ‘ಡಿಸೆಂಬರ್ 31ರ ‘ಕುಡುಕರ ದಿನಾಚರಣೆ’ ಅಂಗವಾಗಿ ಪಾರ್ಟಿಗೆ ಅರ್ಜಿ’ ಎಂದು ಬರೆಯಲಾಗಿದೆ. ಹಾಗೇ ಈ ಅಪ್ಲಿಕೇಷನ್ ಅಂದ್ರೆ ಅರ್ಜಿಗೆ ‘ಫಾರ್ಮ್ ನಂ. 30 & 60’ ಎಂದು ಹೆಸರನ್ನು ಕೊಡಲಾಗಿದೆ. ಈ ಮೂಲಕ ಆರಂಭವಾಗುವ ಅರ್ಜಿಯಲ್ಲಿ ಫೋಟೋ ಅಂಟಿಸೋದಕ್ಕೂ ಜಾಗ ಬಿಟ್ಟಿದ್ದು ವಿಶೇಷ ಎಂಬುದನ್ನು ಗಮನಿಸ ಬಹುದಾಗಿದೆ.


ನಿರುದ್ಯೋಗಿ ಯುವಕರಿಗೆ ಗುಡ್‌ ನ್ಯೂಸ್.!‌ ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ ಕೇಂದ್ರದಿಂದ 90 ಸಾವಿರ ರೂ ನೇರ ಖಾತೆಗೆ ಜಮೆ

ಕುಡುಕರು ಏನೆಲ್ಲಾ ಮಾಹಿತಿ ನೀಡಬೇಕು?

ಹಾಗೆಯೇ ಈ ಅರ್ಜಿಯಲ್ಲಿ ಮಾಹಿತಿ ನೀಡುವವರು ತಮ್ಮ ಸಂಪೂರ್ಣ ಹೆಸರನ್ನು ಕೂಡ ತಿಳಿಸಬೇಕು ಎಂದು ಕೋರಲಾಗಿದೆ. ಮನೆ ವಿಳಾಸ, ಮನೆಯ ದೂರವಾಣಿ ಸಂಖ್ಯೆ, ಮದ್ಯದ ಪ್ರಕಾರನ ಅಂದರೆ ಯಾವ ಬ್ರ್ಯಾಂಡ್ ಅಂತ ತಿಳಿಸಬೇಕಾಗಿದೆ. ಹಾಗೇ, ಯಾವುದರ ಜೊತೆಗೆ ಮಿಕ್ಸಿಂಗ್ ಮಾಡ್ತಾರೆ ಅನ್ನೋದನ್ನೂ ತಿಳಿಸಬೇಕಂತೆ. ಈ ಪ್ರಕಾರ ನೀರು ಮತ್ತು ಸೋಡ ಹಾಗೂ ಕೋಕ್ ಆಪ್ಷನ್ ನೀಡಲಾಗಿದೆ ಮದ್ಯ ಪ್ರಿಯರಿಗೆ.

ಸ್ನ್ಯಾಕ್ಸ್‌ಗೆ ಏನು ಬೇಕಾಗುತ್ತೆ ಹೇಳಿ?

ಈ ಮಧ್ಯೆ ಕುಡಿಯುವಾಗ ಸ್ನ್ಯಾಕ್ಸ್‌ಗೆ ಏನ್ ಬೇಕು? ಅಂತಲೂ ಅರ್ಜಿಯಲ್ಲಿ ತಿಳಿಸಬೇಕಿದೆ. ಹಾಗೂ ಕುಡಿಯಲು ಬರುವವರು ವೆಜ್ ಅಥವಾ ನಾನ್ ವೆಜ್? ಅನ್ನೋದನ್ನು ತಿಳಿಸಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಹಾಗೇ ತಾಯಿ ಅಥವಾ ಪತ್ನಿ ಪರ್ಮಿಷನ್ ಪಡೆದು ಬಂದಿದ್ದೀರಾ? ಎಂದು ತಿಳಿಸಬೇಕು. ಹಾಗೇ ಯಾರು ಪರ್ಮಿಷನ್ ಕೊಟ್ಟಿರುತ್ತಾರೋ ಅವರ ಸೈನ್ ಕೂಡ ಇರಬೇಕಂತೆ!

ಆದರೆ ಸೋಷಿಯಲ್ ಮೀಡಿಯಾದಲ್ಲಿ ಈ ಅಪ್ಲಿಕೇಷನ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹಾಗೇ ಕುಡುಕರ ಸಂಘದ ವಿಚಾರ ಕೂಡ ಎಲ್ಲೆಡೆ ಹಬ್ಬುತ್ತಿದೆ. ಹೊಸ ವರ್ಷ ಹತ್ತಿರ ಬಂದ ಹಿನ್ನೆಲೆ ಕುಡುಕರು ಅಥವಾ ಮದ್ಯ ಪ್ರಿಯರು ಈ ಅಪ್ಲಿಕೇಷನ್ ಶೇರ್ ಮಾಡಿ ನಸುನಗೆ ಬೀರುತ್ತಿದ್ದಾರೆ.

ಆರ್‌ಬಿಐ ನ್ಯೂ ರೂಲ್ಸ್.!! ರಾಜ್ಯಗಳ ಆರ್ಥಿಕ ಸ್ಥಿತಿಯ ಕುರಿತು ಆರ್‌ಬಿಐ ಅಧ್ಯಯನ; ‌ಏನಿದು ಹೊಸ ನಿಯಮ??

ಸ್ವಂತ ಮನೆ ಕನಸು ಇನ್ನು ದುಬಾರಿ.!! 3 ತಿಂಗಳಲ್ಲಿ ಮನೆ ಬೆಲೆ ಏರಿಕೆ; ಯಾಕೆ ಗೊತ್ತಾ??

Leave a Comment