ಹಲೋ ಸ್ನೇಹಿತರೇ, ಪ್ರಧಾನ ಮಂತ್ರಿ ಉಜ್ವಲ ಯೋಜನೆ ಬಹಳ ಫೇಮಸ್ ಆಗಿದೆ ಎಂದೇ ಹೇಳಬಹುದು. ಈ ಯೋಜನೆಯಿಂದಾಗಿ ಲಕ್ಷಾಂತರ ಕುಟುಂಬಗಳು ಮನೆಯಲ್ಲಿ ತಮ್ಮದೆ ಓಲೆಯಲ್ಲಿ ಅಡುಗೆ ಮಾಡಿಕೊಳ್ಳುವಂತೆ ಆಗಿದೆ. ಅದರಲ್ಲಿಯೂ ಮುಖ್ಯವಾಗಿ ಮಹಿಳೆಯರು ಹೆಚ್ಚು ಪ್ರಯೋಜನವನ್ನು ಪಡೆದುಕೊಂಡಿದ್ದಾರೆ ಎನ್ನುವುದು ಸರ್ಕಾರದ ಅರಿವಿಗೆ ಬಂದಿದೆ, ಈ ಯೋಜನೆಯ ಬಗೆಗಿನ ಹೆಚ್ಚಿನ ವಿವರವನ್ನು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆ
ಇತ್ತೀಚಿನ ದಿನಗಳಲ್ಲಿ ಲಕ್ಷಾಂತರ ಕುಟುಂಬಗಳಿಗೆ ಉಜ್ವಲ ಯೋಜನೆಯಲ್ಲಿ ಉಚಿತ ಗ್ಯಾಸ್ ಕಲೆಕ್ಷನ್ ಹಾಗೂ ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲೆಂಡರ್ ನೀಡಲಾಗುತ್ತಿದೆ.
ನೀವು ಸುಲಭವಾಗಿ ಹತ್ತಿರದ ಸೇವಾ ಸಿಂಧೂ ಕೇಂದ್ರಗಳಲ್ಲಿ ಅಥವಾ ಗ್ಯಾಸ್ ಏಜೆನ್ಸಿ ಗೆ ಹೋಗಿ, ಉಚಿತ ಗ್ಯಾಸ್ ಗಾಗಿ ಬುಕಿಂಗ್ ಮಾಡಬಹುದು ಅಥವಾ ಇದೆಲ್ಲ ಬೇಡ ಎನಿಸಿದರೆ ಸುಲಭವಾಗಿ ಮೊಬೈಲ್ ನಲ್ಲಿಯೇ ಅರ್ಜಿ ಸಲ್ಲಿಸಬಹುದು.
ಉಜ್ವಲ ಯೋಜನೆಗೆ ಸಲ್ಲಿಸುವುದು ಹೇಗೆ?
- ಹೌದು ಆನ್ಲೈನ್ ಮೂಲಕ ಸುಲಭವಾಗಿ ಗ್ಯಾಸ್ ಕನೆಕ್ಷನ್ ಗಾಗಿ ಅರ್ಜಿ ಸಲ್ಲಿಸಬಹುದು. ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಅನ್ನು ಉಚಿತವಾಗಿ ಪಡೆದುಕೊಳ್ಳಲು ಸರ್ಕಾರ ಕೆಲವು ಮಾನದಂಡಗಳನ್ನು ನಿರ್ಧರಿಸಿದೆ. ಆ ಮಾನದಂಡಗಳ ಒಳಗೆ ಬರುವ ಕುಟುಂಬಗಳಿಗೆ ಉಚಿತವಾಗಿ ಎಲ್ ಪಿ ಜಿ ಕನೆಕ್ಷನ್ ಪಡೆದುಕೊಳ್ಳಲು ಸಾಧ್ಯವಿದೆ.
- ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಲು ಮೊದಲು ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಬ್ರೌಸರ್ ಓಪನ್ ಮಾಡಿ.
- ಗೂಗಲ್ ನಲ್ಲಿ ಉಜ್ವಲ ಯೋಜನೆ ಎಂದು ಸರ್ಚ್ ಮಾಡಿ.
ತೆರಿಗೆ ಪಾವತಿದಾರರಿಗೆ ಸಂತಸದ ಸುದ್ದಿ! 2024ರ ಬಜೆಟ್‌ನಲ್ಲಿ ₹50 ಸಾವಿರ ಹೆಚ್ಚುವರಿ ತೆರಿಗೆ ವಿನಾಯ್ತಿ!
- https://www.pmuy.gov.in/kn/ujjwala2.html ಈ ವೆಬ್ಸೈಟ್ ಕಾಣಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ. ಅಥವಾ ನೇರ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಉಜ್ವಲ ಯೋಜನೆಯ ಅಧಿಕೃತ ವೆಬ್ಸೈಟ್ ತೆರೆದುಕೊಳ್ಳುತ್ತದೆ.
- ಈಗ ಹೊಸ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ನೀವು ನಿಮಗೆ ಬೇಕಾದ ಭಾಷೆಯನ್ನು ಬದಲಾಯಿಸಬಹುದು. ಸಾಮಾನ್ಯವಾಗಿ ಇಂಗ್ಲಿಷ್ ಭಾಷೆಯಲ್ಲಿ ಇರುತ್ತದೆ. ಮುಂದಿನ ಹಂತವಾಗಿ ಮುಖಪುಟದಲ್ಲಿ ಕಾಣುವ Click here to apply for New Ujjwala 2.0 connectionನ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ಅಲ್ಲಿ ತಿಳಿಸಿರುವ ಎಲ್ಲಾ ಮಾನದಂಡಗಳ ಅಡಿಯಲ್ಲಿ ನೀವು ಬರುವುದಾದ್ರೆ, ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ. ನಂತರ ಅಪ್ಲೈ ನೈ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಈಗ ನಮ್ಮ ದೇಶದಲ್ಲಿ ಮುಖ್ಯವಾಗಿರುವ ಗ್ಯಾಸ್ ಕನೆಕ್ಷನ್ ಏಜೆನ್ಸಿಗಳಾದ Bharath, Indian, HP ಈ ಮೂರು ಏಜೆನ್ಸಿಗಳ ಲಿಂಕ್ ಕಾಣಿಸುತ್ತದೆ. ನಿನ್ನ ಹತ್ತಿರದ ಏಜೆನ್ಸಿ ಯಾವುದು ಎಂದು ನೋಡಿ ಅದರ ಮೇಲೆ ಕ್ಲಿಕ್ ಮಾಡಿ.
- ಆಗ ನಿಮಗೆ ಯಾವ ಗ್ಯಾಸ್ ಕನೆಕ್ಷನ್ ಕಂಪನಿ ಆಯ್ಕೆ ಮಾಡಿದ್ದಿರೋ ಆ ಕಂಪನಿಯ ಅಧಿಕೃತ ವೆಬ್ಸೈಟ್ ತೆರೆದುಕೊಳ್ಳುತ್ತದೆ.
- Regular LPG connection or Ujwala 2.0 New connection ಈ ಎರಡು ಆಯ್ಕೆಗಳನ್ನು ಕಾಣಿಸುತ್ತವೆ. ಅದರಲ್ಲಿ ಎರಡನೆಯ ಆಯ್ಕೆ ನ್ಯೂ ಕನೆಕ್ಷನ್ ಎಂಬುದನ್ನು ಆಯ್ದುಕೊಳ್ಳಿ.
- ಈಗ ಡಿಕ್ಲರೇಷನ್ ನೋಟ್ ಎಂದು ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಓಕೆ ಎಂದು ಅನುಮೋದಿಸಿ.
- ಈಗ ನಿಮ್ಮ ಜಿಲ್ಲೆ ಹಾಗೂ ತಾಲೂಕನ್ನು ಆಯ್ಕೆ ಮಾಡಬೇಕು. ಬಳಿಕ ನಿಮ್ಮ ಹತ್ತಿರದ ಗ್ಯಾಸ್ ಕನೆಕ್ಷನ್ ಏಜೆನ್ಸಿ ಗಳ ಲಿಸ್ಟ್ ಬರುತ್ತದೆ. ಇದನ್ನು ಆಯ್ದುಕೊಂಡು ಮುಂದಿನ ಪ್ರಕ್ರಿಯೆಗೆ ಕಂಟಿನ್ಯೂ ಎಂದು ಕ್ಲಿಕ್ ಮಾಡಿ ಮತ್ತೆ ಈಗ ನಿಮ್ಮ ಅರ್ಜಿ ಸ್ವೀಕಾರವಾಗಿರುತ್ತದೆ. ಕೊನೆಯದಾಗಿ ಸ್ವೀಕೃತಿ ಪ್ರತಿ ಪಡೆದುಕೊಳ್ಳುವುದನ್ನು ಮರೆಯಬೇಡಿ.
ಇತರೆ ವಿಷಯಗಳು:
ಮಹಿಳೆಯರ ಕಲ್ಯಾಣಕ್ಕಾಗಿ ಇನ್ನೊಂದು ಯೋಜನೆ.! ಪ್ರತಿ ಮಹಿಳೆಯರ ಖಾತೆಗೆ ಕೇಂದ್ರದಿಂದ ನಗದು ವರ್ಗಾವಣೆ
ಪತಂಜಲಿ ಹೊಸ ಸಿಮ್ ಕಾರ್ಡ್ ಬಿಡುಗಡೆ: ಕೇವಲ 144 ರೂ.ಗೆ! ಪ್ರತಿದಿನ 2GB ಡೇಟಾ & ಉಚಿತ ಕರೆ