ನಮಸ್ಕಾರ ಸ್ನೇಹಿತರೇ, ಈ ವರ್ಷದಲ್ಲಿನ ಮಳೆಯ ಅಭಾವದ ಕಾರಣದಿಂದ ರೈತರಿಗೆ ಬಹಳ ಅನಾನುಕೂಲ ಆಗಿದೆ, ಉತ್ತಮವಾದ ಬೆಳೆ ತೆಗೆಯಲು ಈ ಬಾರಿ ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಸುಮಾರು 220ಕ್ಕೂ ಹೆಚ್ಚಿನ ಪ್ರದೇಶಗಳನ್ನು ಬರಪೀಡಿತ ಪ್ರದೇಶಗಳು ಎಂದು ಘೋಷಣೆ ಮಾಡಿದೆ.
ಬರಪೀಡಿತ ಪ್ರದೇಶದ ಫಲಾನುಭವಿ ಜನರಿಗೆ ಬಿಪಿಎಲ್ ಕಾರ್ಡ್ ಹೊಂದಿದ್ದರೆ ಉಚಿತ ಅಕ್ಕಿಯನ್ನು ಸರ್ಕಾರ ನೀಡುತ್ತಿದೆ. ಅಂದರೆ ಅನ್ನಭಾಗ್ಯ ಯೋಜನೆಯಡಿಯಲ್ಲಿ ಪ್ರತಿಯೊಬ್ಬರಿಗೆ 5 ಕೆಜಿ ಅಕ್ಕಿಯ ಬದಲು ಹಣವನ್ನು ಪ್ರತಿಯೊಬ್ಬರ ಖಾತೆಗೆ ಜಮಾ ಮಾಡಲಾಗುತ್ತಿದೆ. ಆದ್ರೆ ಬರಪೀಡಿತ ಪ್ರದೇಶದಲ್ಲಿ ಮಾತ್ರ ಹಣದ ಬದಲು ಐದು ಕೆಜಿ ಅಕ್ಕಿಯನ್ನೇ ಒದಗಿಸಲು ಸರ್ಕಾರ ಮುಂದಾಗಿತ್ತು.
ಬರಪೀಡಿದ ಪ್ರದೇಶಕ್ಕೆ 2,000 ರೂ. ಪರಿಹಾರ
ಸರ್ಕಾರದಿಂದ ಘೋಷಣೆಯಾಗಿರುವ ಬರಪೀಡಿತ ಪ್ರದೇಶದಲ್ಲಿ ಅರ್ಹ ರೈತರಿಗೆ ಬೆಳೆ ಹಾನಿ ಎರಡು ಸಾವಿರ ರೂಪಾಯಿಗಳ ಮೊದಲ ಕಂತನ್ನು ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದೆ. ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.”ಬರ ಪರಿಹಾರಕ್ಕೆ ಸಂಬಂಧ ಪಟ್ಟ ಹಾಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು ಈಗಾಗಲೇ ರಾಜ್ಯದ ಸಚಿವರು ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಲು ದೆಹಲಿಗೂ ಹೋಗಿದ್ದರು.
ಫೋನ್ ಪೇಯಲ್ಲಿ ಹಣ ಇಲ್ಲದಿದ್ದರೂ ಲೋನ್ ಪಡೆಯಬಹುದು ಕೇವಲ 2 ನಿಮಿಷದಲ್ಲಿ
ಆದ್ರೆ ಪ್ರಾಥಮಿಕ ಸಭೆಯನ್ನು ಕೂಡ ಕೇಂದ್ರ ಸರ್ಕಾರ ನಡೆಸಿಲ್ಲ. ಈ ವಿಳಂಬದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೇ ಬರಪೀಡಿತ ಪ್ರದೇಶದ ಫಲಾನುಭವಿ ರೈತರ ಖಾತೆಗೆ ಬೆಳೆ ಪರಿಹಾರವಾಗಿ ಎರಡು ಸಾವಿರ ರೂಪಾಯಿಗಳನ್ನು ಜಮಾ ಮಾಡುತ್ತಿದೆ” ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿಕೊಂಡಿದ್ದಾರೆ.
ಬೆಳೆ ಪರಿಹಾರ ಪಡೆದುಕೊಳ್ಳಲು ಈ ಐಡಿ ಅಗತ್ಯ
ಇಂದು ಸರ್ಕಾರದಿಂದ ರೈತರಿಗೆ ಲಭ್ಯವಾಗುವಂತಹ ಬೆಳೆ ಪರಿಹಾರ ನಿಧಿ, ಸರ್ಕಾರದ ಸಾಲ ಸೌಲಭ್ಯಗಳು, ಸಬ್ಸಿಡಿ, ಕಿಸಾನ್ ಯೋಜನೆಯ ಹಣ ಹೀಗೆ ಯಾವುದೇ ರೀತಿಯ ಪ್ರಯೋಜನ ಪಡೆದುಕೊಳ್ಳುವುದಿದ್ದರು ಕೂಡ ರೈತರು ಫ್ರೂಟ್ಸ್ ಐಡಿ ಹೊಂದಿರುವುದು ಕಡ್ಡಾಯವಾಗಿದೆ. ಒಂದು ವೇಳೆ ಈ ಐಡಿ ಇಲ್ಲದ ರೀತಿಯಲ್ಲಿ ತಕ್ಷಣವೇ ಮಾಡಿಕೊಳ್ಳಿ ಇಲ್ಲವಾದರೆ ನಿಮ್ಮ ಖಾತೆಗೆ ಹಣ ಜಮಾ ಆಗುವುದಿಲ್ಲ.
ಬರ ಪರಿಹಾರ ನಿಧಿ ಜಮಾ ಆಗಿದೆಯಾ?
ಸರ್ಕಾರದ ಅಧಿಕೃತ ವೆಬ್ಸೈಟ್ ಲಿಂಕ್ ಮೂಲಕ ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಿ ಮೊದಲ ಪುಟಕ್ಕೆ ಪ್ರವೇಶ ಪಡೆಯಬಹುದು. ನಂತರ ನಿಮ್ಮ ಫ್ರೂಟ್ಸ್ ಐಡಿ FID ಯನ್ನು ನಮೂದಿಸಿ. ಈಗ ನಿಮ್ಮ ಹೆಸರು ಕಾಣಿಸಿದರೆ ನಿಮ್ಮ ಖಾತೆಗೂ ಹಣ ಜಮಾ ಆಗಿದೆ ಎಂದು ಅರ್ಥ, ಇಲ್ಲಾಂದ್ರೆ ಸ್ವಲ್ಪ ಸಮಯದಲ್ಲಿಯೇ ನಿಮ್ಮ ಖಾತೆಗೂ ಹಣ ಜಮಾ ಆಗಬಹುದು.
ಇತರೆ ವಿಷಯಗಳು:
1.2 ಕೋಟಿ ರೈತರ ಸಾಲ ಮನ್ನಾ ಘೋಷಣೆ.! ಸರ್ಕಾರದಿಂದ ಹೊಸ ಲಿಸ್ಟ್ ಬಿಡುಗಡೆ.! ಈ ಲಿಂಕ್ ಬಳಸಿ ಹೆಸರನ್ನು ಚೆಕ್ ಮಾಡಿ
ಗೂಗಲ್ ಪೇ ಬಳಸುವವರಿಗೆ ಆಘಾತ! ಹೊಸ ನಿಯಮ ಜಾರಿಗೆ.! ಪೇಮೆಂಟ್ ಮಾಡುವ ಮುನ್ನ ಎಚ್ಚೆತ್ತುಕೊಳ್ಳಿ