ನಮಸ್ಕಾರ ಸ್ನೇಹಿತರೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಗೃಹಲಕ್ಷ್ಮೀ ಯೋಜನೆಗೆ ಸಂಬಂಧಪಟ್ಟಂತೆ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ನೂರು ಪ್ರತಿಶತದಷ್ಟು ಗೃಹಲಕ್ಷ್ಮಿಯರಿಗೆ ಈ ಯೋಜನೆಯ ಮೂಲಕ ಹಣವನ್ನು ಅವರ ಬ್ಯಾಂಕ್ ಖಾತೆಗೆ ತಲುಪಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಹಾಗಾಗಿ ಯೋಜನೆಗೆ ಸಂಬಂಧಿಸಿ ದಂತೆ ಕೆಲವೊಂದು ಸಮಸ್ಯೆಗಳಿಗೆ ಪರಿಹಾರವನ್ನು ರಾಜ್ಯ ಸರ್ಕಾರ ಕಂಡುಕೊಂಡಿದ್ದು ಆ ಸಮಸ್ಯೆಗಳಿಗೆ ಪರಿಹಾರ ಏನು ಎಂಬುದನ್ನು ಇವತ್ತಿನ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದಾಗಿದೆ.

ಗೃಹಲಕ್ಷ್ಮಿ ಯೋಜನೆಯ ಮಹತ್ವದ ನಿರ್ಧಾರ :
ಸರ್ಕಾರವು ಈಗಾಗಲೇ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದ್ದು ಸಾಕಷ್ಟು ತಿಂಗಳುಗಳೆ ಕಳೆದು ಹೋಯಿತು ಅದರಂತೆ ಇದೀಗ ಮಹಿಳೆಯರಿಗೆ ಈಗಾಗಲೇ ಮೂರನೇ ಕಂತಿನ ಹಣವನ್ನು ಸಹ ರಾಜ್ಯ ಸರ್ಕಾರ ಬಿಡುಗಡೆ ಮಾಡುತ್ತಿದೆ. ಆದರೆ ಇನ್ನೂ ಕೆಲವು ಮಹಿಳೆಯರಿಗೆ ಈ ಹಣ ಬರದೆ ಇರುವುದರಿಂದ ರಾಜ್ಯ ಸರ್ಕಾರವು ಕೈಗೊಂಡಿರುವ ಈ ಮಹತ್ವದ ನಿರ್ಧಾರದಿಂದ ಮಹಿಳೆಯರ ಖಾತೆಗೆ ಮಾತ್ರವಲ್ಲದೆ ಮನೆಯಲ್ಲಿರುವ ಯಜಮಾನನ ಖಾತೆಗೂ ಹಣವನ್ನು ವರ್ಗಾವಣೆ ಮಾಡಬಹುದಾಗಿದೆ. 1.27 ಕೋಟಿ ಪಡಿತರ ಕಾರ್ಡ್ ಅನ್ನು ಅನ್ನಭಾಗ್ಯ ಯೋಜನೆಯಡಿಯಲ್ಲಿ ರಾಜ್ಯದ ಜನತೆಗೆ ಹೊಂದಿದ್ದು ಅದರಲ್ಲಿ ಸುಮಾರು 7.67 ಲಕ್ಷ ಜನರು ಅನ್ನಭಾಗ್ಯ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವಲ್ಲಿ ಅನರ್ಹರಾಗಿದ್ದಾರೆ ಅಲ್ಲದೆ 5 ಕೆಜಿ ಅಕ್ಕಿಗೆ ಬದಲು ರಾಜ್ಯ ಸರ್ಕಾರವು ಪ್ರತಿ ಕೆಜಿಗೆ 34 ರೂಪಾಯಿಗಳಂತೆ, 170ಗಳನ್ನು ಮನೆಯ ಯಜಮಾನಿಗೆ ವರ್ಗಾವಣೆ ಮಾಡುತ್ತಿತ್ತು. ಆದರೆ ಇದರಲ್ಲಿರುವ ಕೆಲವೊಂದು ಸಮಸ್ಯೆಗಳಿಂದ ಹಾಗೂ ತಾಂತ್ರಿಕ ದೋಷಗಳಿಂದ ರಾಜ್ಯ ಸರ್ಕಾರದಿಂದ ಈ ಯೋಜನೆಗಳ ಮೂಲಕ ಹಣವನ್ನು ಪಡೆದುಕೊಳ್ಳುವಲ್ಲಿ ಹಲವು ಕುಟುಂಬದವರು ವಿಫಲರಾಗಿದ್ದಾರೆ ಹಾಗಾಗಿ ಈ ನಿಟ್ಟಿನಲ್ಲಿ ಎಲ್ಲರ ಖಾತೆಗೆ ಹಣ ಬರುವ ಉದ್ದೇಶದಿಂದ ಸರ್ಕಾರವು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ಇದನ್ನು ಓದಿ : ಸ್ಮಾರ್ಟ್ ರೇಷನ್ ಕಾರ್ಡ್ ವಿತರಣೆ : ಇನ್ನುಮುಂದೆ ಅಕ್ಕಿ ಮತ್ತು ಹಣ ಪಡೆಯಲು ಈ ಕಾರ್ಡ್ ಕಡ್ಡಾಯ
ಮನೆಯ ಯಜಮಾನನ ಖಾತೆಗೆ ಹಣ ವರ್ಗಾವಣೆ :
ಗುರುವಾರ ಸಚಿವ ಸಂಪುಟ ನಡೆಸಿದ ರಾಜ್ಯ ಸರ್ಕಾರವು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡಿರುವುದರ ಬಗ್ಗೆ ಹೆಚ್ ಕೆ ಪಾಟೀಲ್ ರವರು ಮಾಹಿತಿ ನೀಡಿದ್ದಾರೆ. ಮಹಿಳೆಯರ ಬ್ಯಾಂಕ್ ಖಾತೆಯಲ್ಲಿ ಕೆಲವೊಂದು ತಾಂತ್ರಿಕ ದೋಷಗಳು ಇರುವ ಕಾರಣ ಅವರ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡುತ್ತಿಲ್ಲ ಹಾಗಾಗಿ ಇದರ ಬಗ್ಗೆ ಸರ್ಕಾರವು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು ಅನ್ನಭಾಗ್ಯ ಯೋಜನೆಯ ಹಣವನ್ನು ಮಾತ್ರವಲ್ಲದೆ ಗೃಹಲಕ್ಷ್ಮಿ ಯೋಜನೆಯಲ್ಲಿಯೂ ಕೆಲವೊಂದು ತಾಂತ್ರಿಕ ದೋಷಗಳಿರುವುದರಿಂದ ಇನ್ನು ನಾಲ್ಕರಿಂದ ಐದು ಲಕ್ಷ ಮಹಿಳೆಯರ ಖಾತೆಗೆ ಕೆಲವೊಂದು ಹಣವು ವರ್ಗಾವಣೆ ಆಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮನೆಯ ಯಜಮಾನಿಯ ಖಾತೆಯಲ್ಲಿ ಸಮಸ್ಯೆ ಇದ್ದರೆ ಎರಡನೇ ಸದಸ್ಯ ಅಥವಾ ಎರಡನೇ ಮನೆಯ ಹಿರಿಯ ಸದಸ್ಯರಿಗೆ ಸರ್ಕಾರವು ಈ ಎರಡು ಯೋಜನೆಗಳ ಹಣವನ್ನು ವರ್ಗಾವಣೆ ಮಾಡಲು ನಿರ್ಧರಿಸಿದೆ. ಕುಟುಂಬದ ಮೊದಲ ಯಜಮಾನ ಅಲ್ಲದೆ ಇದ್ದರೆ ಎರಡನೇ ಸದಸ್ಯರ ಖಾತೆಗೆ ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣವನ್ನು ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದೆ. ಮನೆಗೆ ಎರಡನೇ ಹಿರಿಯ ವ್ಯಕ್ತಿ ಯಾರು ಎಂಬುದನ್ನು ನಿಮ್ಮ ರೇಷನ್ ಕಾರ್ಡ್ ಆಧಾರದ ಮೇಲೆ ಗುರುತಿಸಿ, ಅವರ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ ಒಂದು ವೇಳೆ ಎರಡನೇ ಸದಸ್ಯರು ವ್ಯಕ್ತಿ ಆಗಿರದೆ ಇದ್ದರೆ ಮೂರನೇ ವ್ಯಕ್ತಿಯು ಹಿರಿಯ ಸದಸ್ಯರಾಗಿದ್ದರೆ ಆ ವ್ಯಕ್ತಿಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ ಒಟ್ಟಾರೆಯಾಗಿ ಮನೆಯ ಹಿರಿಯ ಸದಸ್ಯರಿಗೆ ಹಣ ವರ್ಗಾವಣೆಯಾಗುವುದಂತು ಖಚಿತವಾಗಿದೆ.
ರಾಜ್ಯ ಸರ್ಕಾರದ ಈ ನಿರ್ಧಾರದಉದ್ದೇಶವೇನೆಂದರೆ ಯಜಮಾನನ ನಂತರದ ಹಿರಿಯ ವ್ಯಕ್ತಿಗೆ ಹಣವನ್ನು ವರ್ಗಾವಣೆ ಮಾಡಬೇಕು ಎನ್ನುವುದಾಗಿದೆ ಹಾಗಾಗಿ ಯಜಮಾನ ಖಾತೆಗೆ ಹಣ ಬಾರದೆ ಇದ್ದರೆ ತಕ್ಷಣ ಎರಡನೇ ಹಿರಿಯ ಸದಸ್ಯನ ಖಾತೆಗೆ ಹಣ ಬಂದಿರುವುದನ್ನು ತಿಳಿದುಕೊಳ್ಳಬಹುದಾಗಿದೆ ಹಾಗಾಗಿ ಮನೆಯಲ್ಲಿ ಎರಡನೇ ಹಿರಿಯ ಸದಸ್ಯನ ಖಾತೆಯನ್ನು ಚೆಕ್ ಮಾಡುವುದು ಅಗತ್ಯವಾಗಿರುತ್ತದೆ. ಜೊತೆಗೆ ಮನೆ ಮನೆಗೆ ಬಂದು ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಮಹಿಳೆಯರ ಖಾತೆಯಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಿ ಪ್ರತಿಯೊಬ್ಬರ ಖಾತೆಗೂ ಗೃಹಲಕ್ಷ್ಮಿ ಯೋಜನೆಯ ಹಣ ಹಾಗೂ ಅನ್ನಭಾಗ್ಯ ಯೋಜನೆಯ ಹಣ ಬರುವಂತೆ ಮಾಡುತ್ತಾರೆ ಎಂದು ಮಕ್ಕಳ ಮತ್ತು ಮಹಿಳಾ ಸಚಿವೆ ಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಒಟ್ಟಾರೆಯಾಗಿ ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯ ಹಣ ಯಾರಿಗೆಲ್ಲ ಬಂದಿಲ್ಲವೋ ಅವರು ತಮ್ಮ ಮನೆಯ ಎರಡನೇ ಹಿರಿಯ ಸದಸ್ಯರ ಖಾತೆಯನ್ನು ಚೆಕ್ ಮಾಡಿಕೊಳ್ಳುವುದರ ಮೂಲಕ ಹಣ ವರ್ಗಾವಣೆ ಆಗಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಾದವ ಬಂದು ಮಿತ್ರರಲ್ಲಿ ಇನ್ನು ಸಹ ಗೃಹಲಕ್ಷ್ಮಿ ಯೋಜನೆಯ ಹಾಗೂ ಅನ್ನಭಾಗ್ಯ ಯೋಜನೆಯ ಹಣವನ್ನು ಪಡೆಯದೆ ಇದ್ದರೆ ಅವರಿಗೆ ಶೇರ್ ಮಾಡುವ ಮೂಲಕ ನಿಮ್ಮ ಮನೆಯ ಎರಡನೇ ಸದಸ್ಯರಿಗೆ ಹಣ ವರ್ಗಾವಣೆ ಆಗುತ್ತದೆ ಎಂಬುದರ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ಈ ಬೆಳೆ ಬೆಳೆದರೆ ಎಕರೆಗೆ 5 ಲಕ್ಷ ಫಿಕ್ಸ್; ವಿಶ್ವವಿದ್ಯಾನಿಲಯವು ಅಭಿವೃದ್ಧಿಪಡಿಸಿದೆ
500 ರೂ ನೋಟು ಬಳಸುವವರು ಒಮ್ಮೆ ನೋಡಿ; ರಿಸರ್ವ್ ಬ್ಯಾಂಕಿನಿಂದ ಹೊಸ ಮಾರ್ಗಸೂಚಿ ಬಿಡುಗಡೆ