rtgh

ಹಿಂದುಳಿದ ವರ್ಗದ ವಿದ್ಯಾರ್ಥಿಗಳೇ ಇತ್ತ ಕಡೆ ಗಮನ ಕೊಡಿ.!! ಇನ್ನೂ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿಲ್ವಾ? ಹಾಗಾದ್ರೆ ಚೆಕ್‌ ಮಾಡಿ

ನಮಸ್ಕಾರ ಸ್ನೇಹಿತರೇ, ಪ್ರಸಕ್ತ ಸಾಲಿಗೆ ಮೆಟ್ರಿಕ್ ನಂತರ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಮತ್ತು ಪ್ರವರ್ಗ-1ರ ಅಲೆಮಾರಿ/ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಿದ್ದಾರೆ. “ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಶುಲ್ಕವಿನಾಯಿತಿ, ವಿದ್ಯಾಸಿರಿ-ಊಟ ಹಾಗೂ ವಸತಿ ಸಹಾಯ ಯೋಜನೆ ಸೌಲಭ್ಯಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು 2024 ರ ಜನವರಿ, 10 ಕೊನೆಯ ದಿನವಾಗಿದೆ ಅಷ್ಟರಲ್ಲಿಯೇ ಪ್ರತಿಯೊಬ್ಬ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

Scholarship for Backward Classes

ಆನ್ಲೈನ್ ಮೂಲಕ ನೀವು ಅರ್ಜಿ ಸಲ್ಲಿಸಬೇಕಾದ ವೆಬ್ಸೈಟ್ https://ssp.postmatric.karnataka.gov.in ಕಾರ್ಯಕ್ರಮಗಳ ವಿವರ ಹಾಗೂ ಸೌಲಭ್ಯ ಪಡೆಯಲು ಇರಬೇಕಾದ ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳು ಹಾಗೂ ಕಾರ್ಯಕ್ರಮಗಳ ಸರ್ಕಾರಿ ಆದೇಶಗಳಿಗಾಗಿ ಇಲಾಖಾ ವೆಬ್ಸೈಟ್ https://bcwd.karnataka.gov.in ನ್ನು ಸಂಪರ್ಕಿಸಬೇಕು.

ಹೆಚ್ಚಿನ ಮಾಹಿತಿಗೆ ಇಲಾಖಾ ಸಹಾಯವಾಣಿ ಸಂಖ್ಯೆ: 8050770005, ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ಸಹಾಯವಾಣಿ ಇಮೇಲ್: [email protected] ದೂರವಾಣಿ ಸಂಖ್ಯೆ:1902 ನ್ನು ಸಂಪರ್ಕಿಸಿ ಮತ್ತು ಅಗತ್ಯವಿರುವ ಮಾಹಿತಿಯನ್ನು ತಿಳಿದುಕೊಳ್ಳಿ. ಅರ್ಹ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೊಡಗು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ. ಈ ಮೂಲಕ ಪ್ರತಿಯೊಬ್ಬ ಬಡ ವಿದ್ಯಾರ್ಥಿಯ ಮುಂದಿನ ಜೀವನಕ್ಕೆ ಸಹಕಾರಿಯಾಗುತ್ತದೆ.

ರೈತರಿಗೆ ಬ್ಯಾಡ್‌ ನ್ಯೂಸ್.!!‌ ಈ ಕಾರ್ಡ್ ಇದ್ದವರಿಗೆ ಮಾತ್ರ ಬರ ಪರಿಹಾರ ಪಡೆಯಲು ಸಾ‍ಧ್ಯ; ಇಲ್ಲಿಂದ ಚೆಕ್‌ ಮಾಡಿ

ರೈಲ್ವೆ ಪ್ರಯಾಣಿಕರಿಗೆ ಬಂಪರ್‌ ನ್ಯೂಸ್.! ಒಂದೇ ಟಿಕೆಟ್ ನಲ್ಲಿ 56 ದಿನ ಪ್ರಯಾಣ; ಇಂದಿನಿಂದಲೇ ಬುಕಿಂಗ್ ಆರಂಭ


Leave a Comment