rtgh

ರಾತ್ರಿ ಲೇಟಾಗಿ ನಿದ್ರೆ ಮಾಡುತ್ತಿದ್ದೀರಾ? ಹಾಗಾದ್ರೆ ಈ ವಿಚಾರ ತಿಳಿದಿರಲಿ

ಹಲೋ ಸ್ನೇಹಿತರೇ, ಪ್ರತಿಯೊಬ್ಬ ವ್ಯಕ್ತಿಗೂ ಕೂಡ ನಿದ್ದೆ ಎನ್ನವುದು ತುಂಬ ಅವಶ್ಯಕ. ಒಬ್ಬ ಸಾಮಾನ್ಯ ವ್ಯಕ್ತಿ ದಿನಕ್ಕೆ 6 ರಿಂದ 7 ಗಂಟೆ ನಿದ್ದೆ ಮಾಡಬೇಕು ಎನ್ನುವುದನ್ನು ವಿಜ್ಞಾನವೇ ತಿಳಿಸಿದೆ, ಆದರೆ ಈಗಿನ ಪ್ರಪಂಚದಲ್ಲಿ ಕೆಲ ಕಾರಣಗಳಿಂದ ಮಕ್ಕಳು ಹಾಗೂ ದೊಡ್ಡವರು ನಿದ್ದೆಯಿಂದ ವಂಚಿತರಾಗುತ್ತಿದ್ದಾರೆ ಇದರಿಂದ ನಿಮ್ಮ ಮೇಲೆ ಹಾಗೂ ನಿಮ್ಮ ಮುಂದಿನ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ, ಅದಕ್ಕಾಗಿ ತಪ್ಪದೇ ಕೊನೆವರೆಗೂ ಓದಿ.

sleeping late at night effects

ತಡವಾಗಿ ಮಲಗುವುದು ಎಂದರೆ ಕಡಿಮೆ ನಿದ್ರೆ ಮಾಡುವುದು ಎಂದರ್ಥ. ಏಕೆಂದ್ರೆ ನೀವು ರಾತ್ರಿ ತಡವಾಗಿ ಮಲಗಿದರೂ ಕೂಡ ದಿನ ನಿತ್ಯ ಏಲುವ ಸಮಯಕ್ಕೆ ನಿದ್ದೆಯಿಂದ ಎಳಲೇ ಬೇಕು ಇದು ನಿಮ್ಮ ದಿನ ನಿತ್ಯದ ಚಕ್ರಕ್ಕೆ ಸಂಭದಿಸಿರುತ್ತದೆ. ಈ ಕಾರಣದಿಂದಲೇ ನಿಮಗೆ ಅನೇಕ ಸಮಸ್ಯೆಗಳು ಕಂಡು ಬರುತ್ತದೆ.

ದೇಹಕ್ಕೆ ಅವಶ್ಯ ಇರುವಷ್ಟು ನಿದ್ದೆ ಮಾಡದೇ ಇದ್ದರೆ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ಮೇಲೆ ಪರಿಣಾಮ ಉಂಟಾಗುತ್ತದೆ. ಇದರಿಂದ ಬೊಜ್ಜು, ಮಧುಮೇಹ, ಹೃದ್ರೋಗ ಸೇರಿದಂತೆ ಆತಂಕದಂತಹ ಮಾನಸಿಕ ಸಮಸ್ಯೆಗಳೂ ಎದುರಾಗುತ್ತವೆ. ಇದು ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ರಾತ್ರಿ ತಡವಾಗಿ ಮಲಗುವುದರಿಂದ ಮುಂಜಾನೆ ಸೂರ್ಯನ ಬೆಳಕು ನೋಡಲು ಆಗುವುದಿಲ್ಲ. ಮುಂಜಾನೆಯ ಎಳೆ ಬಿಸಿಲು ನಮ್ಮ ಸಿರ್ಕಾಡಿಯನ್‌ ಲಯವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನೈಸರ್ಗಿಕ ಬೆಳಕಿಗೆ ಒಡ್ಡಿಕೊಳ್ಳುವುದು ದೇಹದ ಆಂತರಿಕ ಗಡಿಯಾರವನ್ನು ಸಿಂಕ್ರೊನೈಸ್‌ ಮಾಡಲು ಸಹಾಯ ಮಾಡುತ್ತದೆ. ಇದು ಒಟ್ಟಾರೆ ನಿದ್ದೆಯ ಗುಣಮಟ್ಟದ ಸುಧಾರಣೆಗೂ ಸಹಕಾರಿ. ಹಾಗಾದ್ರೆ ತಡವಾಗಿ ನಿದ್ದೆ ಮಾಡುವುದರಿಂದ ಆರೋಗ್ಯದ ಮೇಲೆ ಯಾವೆಲ್ಲಾ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯೋಣ.

1. ಅರಿವಿನ ಸಾಮರ್ಥ್ಯ ಕುಗ್ಗುವುದು: ರಾತ್ರಿ ತಡವಾಗಿ ಮಲಗುವುದರಿಂದ ಇದು ನಮ್ಮ ನೆನಪಿನ ಶಕ್ತಿಯ ಪರಿಣಾಮ ಬೀರುತ್ತದೆ. ಗಮನಶಕ್ತಿ ಕುಗುತ್ತದೆ, ಅಲ್ಲದೆ ಉತ್ಪಾದಕತೆಯು ಕಡಿಮೆಯಾಗುತ್ತದೆ. ತಡವಾಗಿ ಹಾಗೂ ದಿನಕ್ಕೊಂದು ಸಮಯದಲ್ಲಿ ಮಲಗುವುದರಿಂದ ದೇಹ ನೈಸರ್ಗಿಕ ಚಕ್ರವು ಬದಲಾಗುತ್ತದೆ. ಇದು ನಿದ್ದೆ ಮಾಡುವುದು ಹಾಗೂ ಎಚ್ಚರಗೊಳ್ಳುವ ವಿಚಾರದಲ್ಲಿ ತೊಂದರೆ ಉಂಟು ಮಾಡುತ್ತದೆ. ಇದು ದೌರ್ಬಲ್ಯ, ಶಕ್ತಿಯ ಕೊರತೆ ಮತ್ತು ಹಗಲಿನಲ್ಲಿ ಏಕಾಗ್ರತೆಯ ತೊಂದರೆಗೆ ಕಾರಣವಾಗಬಹುದು.


2. ರೋಗನಿರೋಧಕ ಶಕ್ತಿಯ ಮೇಲೆ ಅಡ್ಡ ಪರಿಣಾಮ: ನಿದ್ದೆ ಕಡಿಮೆಯಾದಲ್ಲಿ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಗಳ ಬೆಳವಣಿಗೆಯು ಕುಂಠಿತವಾಗುತ್ತ ಹೋಗುತ್ತದೆ. ಇದರಿಂದ ನೀವು ಪದೇ ಪದೇ ಅನಾರೋಗ್ಯಗಳಿಗೆ ಒಳಾಗುತ್ತೀರಿ, ಸೋಂಕಿನಂತಹ ತೊಂದರೆಗಳು ಉಂಟಾಗುವಂತೆ ಆಗಬಹುದು. ಉತ್ತಮ ನಿದ್ದೆಯಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯವಾಗುತ್ತದೆ.

3. ತೂಕದಲ್ಲಾಗುವ ಬದಲಾವಣೆ: ರಾತ್ರಿ ತಡವಾಗಿ ಊಟವನ್ನು ಮಾಡುವುದು, ನಿದ್ದೆಯ ಅಸಮತೋಲನಗಳು ಹಸಿವು ಹೆಚ್ಚುವುದು, ಅನಾರೋಗ್ಯಕರ ಆಹಾರದ ಕಡುಬಯಕೆಗೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ನಿದ್ದೆಯಲ್ಲಿನ ವ್ಯತ್ಯಾಸಗಳು ಪರೋಕ್ಷವಾಗಿ ತೂಕ ಹೆಚ್ಚಳಕ್ಕೆ ಮೂಲ ಕಾರಣವಾಗಿದೆ.

4. ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ: ಮೊದಲೇ ತಿಳಿಸಿರುವಂತೆ ನಿದ್ದೆಯ ಕೊರತೆಯು ಬೊಜ್ಜು, ಮಧುಮೇಹ ಮತ್ತು ಹೃದಯರಕ್ತನಾಳದ ಕಾಯಿಲೆಗಳಂತಹ ಅಪಾಯವನ್ನು ಹೆಚ್ಚಿಸುತ್ತದೆ.

ನಿರುದ್ಯೋಗಿ ಯುವಕರಿಗೆ ಗುಡ್‌ ನ್ಯೂಸ್.!‌ ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ ಕೇಂದ್ರದಿಂದ 90 ಸಾವಿರ ರೂ ನೇರ ಖಾತೆಗೆ ಜಮೆ

5. ಮೂಡ್‌ ಸ್ವಿಂಗ್‌ನಂತಹ ಸಮಸ್ಯೆಗಳು: ನಿದ್ದೆಯ ಕೊರತೆಯು ನಿಮ್ಮ ಮೇಲೆ ಕಿರಿಕಿರಿ, ಮೂಡ್‌ ಸ್ವಿಂಗ್‌, ಒತ್ತಡದ ಪ್ರಮಾಣವನ್ನು ಹೆಚ್ಚಿಸುತ್ತದೆ, ಖಿನ್ನತೆ ಮತ್ತು ಆತಂಕದಂತಹ ಮಾನಸಿಕ ಅಸ್ವಸ್ಥತೆಗಳಂತಹ ಅಪಾಯಗಳಿಗೆ ನಿಮ್ಮನ್ನೂ ದೂರುತ್ತದೆ.

6. ದೈಹಿಕ ಕಾರ್ಯಕ್ಷಮತೆಯ ಮೇಲೆ ಪರಿಣಾಮ: ತಡವಾಗಿ ಮಲಗುವುದು ದೈಹಿಕ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ದೇಹಕ್ಕೆ ಹಲವು ರೀತಿಯಲ್ಲಿ ಅಪಾಯ ಉಂಟಾಗಬಹುದು.

7. ಚರ್ಮದ ಸಮಸ್ಯೆ: ನಿದ್ದೆಯ ಕೊರತೆಯಿಂದ ಚರ್ಮದ ಸಮಸ್ಯೆಗಳಾದ ಚರ್ಮ ಮಂದವಾಗುವುದು, ಕಪ್ಪು ಕಲೆಗಳು ಉಂಟಾಗುವುದು, ಮೊಡವ ಮತ್ತು ಬೇಗನೆ ವಯಸ್ಸಾದಂತೆ ಕಾಣುವುದು ಇಂತಹ ಸಮಸ್ಯೆಗಳು ಎದುರಾಗಬಹುದು. ಸಾಕಷ್ಟು ಉತ್ತಮ ನಿದ್ದೆಯು ಚರ್ಮದ ಆರೋಗ್ಯ ಉತ್ತಮವಾಗಿರಲು ಸಹಕಾರಿ.

8. ಹಾರ್ಮೋನ್‌ನಲ್ಲಿ ವ್ಯತ್ಯಾಸ: ನಿದ್ರಾಹೀನತೆಯಿಂದ ಹಸಿವು ಮತ್ತು ಚಯಾಪಚಯ ಹಾಗೂ ಒತ್ತಡ ಹಾರ್ಮೋನುಗಳ ವ್ಯತ್ಯಾಸಕ್ಕೆ ಕಾರಣವಾಗುತ್ತದೆ.

9. ಹಾರ್ಮೋನ್‌ ಗಳಲ್ಲಿನ ಅಸಮತೋಲನ: ನಿದ್ದೆಯ ಕೊರತೆಯಿಂದ ಹಾರ್ಮೋನ್ ಗಳ ಅಸಮತೋಲನಕ್ಕೆ ಮುಖ್ಯ ಕಾರಣವಾಗಿದೆ. ಇದರಿಂದ ಒತ್ತಡ ಮತ್ತು ಹಸಿವು ಹೆಚ್ಚಾಗ ಬಹುದು. ದೇಹದ ಪ್ರತಿರಕ್ಷಣಾ ಕಾರ್ಯದಲ್ಲೂ ತೊಂದರೆಗಳು ಉಂಟಾಗಬಹುದು.

ಆರ್‌ಬಿಐ ನ್ಯೂ ರೂಲ್ಸ್.!! ರಾಜ್ಯಗಳ ಆರ್ಥಿಕ ಸ್ಥಿತಿಯ ಕುರಿತು ಆರ್‌ಬಿಐ ಅಧ್ಯಯನ; ‌ಏನಿದು ಹೊಸ ನಿಯಮ??

ಸ್ವಂತ ಮನೆ ಕನಸು ಇನ್ನು ದುಬಾರಿ.!! 3 ತಿಂಗಳಲ್ಲಿ ಮನೆ ಬೆಲೆ ಏರಿಕೆ; ಯಾಕೆ ಗೊತ್ತಾ??

Leave a Comment