ಹಲೋ ಸ್ನೇಹಿತರೇ ನಮ್ಮ ಇಂದಿನ ಲೆಖನಕ್ಕೆ ಸ್ವಾಗತ, ನಾವು ಈ ಲೇಖನದಲ್ಲಿ ಜನರಿಗೋಸ್ಕರ ಸರ್ಕಾರದಿಂದ ಪ್ರಾರಂಬಿಸಿದ ಪಿಂಚಣಿ ಯೋಜನೆಯ ಬಗ್ಗೆ ತಿಳಿಸಿಕೊಡುತಿದ್ದೇವೆ, ಇದರಿಂದ 60 ವರ್ಷ ಮೇಲ್ಪಟ್ಟವರು ಯಾರ ಮೇಲೂ ಕೂಡ ಅವಲಂಬಿತವಾಗಿರುವ ಅವಶ್ಯಕತೆ ಇರುವುದಿಲ್ಲ ಹಾಗಾದರೆ ಈ ಯೋಜನೆಯ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಈ ಲೇಖನವನ್ನು ಓದಿ.

ಯಾವುದೇ ವ್ಯಕ್ತಿ ವಯಸ್ಸಾದ ನಂತರ ಆರ್ಥಿಕವಾಗಿ ಯಾರ ಮೇಲೂ ಕೂಡ ಅವಲಂಬಿತರಾಗಿರಬಾರದು. ಜೊತೆಗೆ ಯಾರೂ ಕೂಡ ಆರ್ಥಿಕವಾಗಿ ಸಹಾಯ ಮಾಡುವುದಿಲ್ಲ ಹಾಗಾಗಿ ನಿವೃತ್ತಿ ನಂತರದ ಬದುಕನ್ನು ಸುಂದರವಾಗಿಸಿಕೊಳ್ಳಲು ನೀವು ಈಗಿನಿಂದಲೇ ಸ್ವಲ್ಪ ಮುತುವರ್ಜಿ ವಹಿಸುವುದು ಒಳ್ಳೆಯದು. ಹಣ ಗಳಿಸುವುದು ತುಂಬಾ ಉತ್ತಮ.
ನಿಮಗೆ ವಯಸಾದ ನಂತರ ನೀವು ಯಾರಮೇಲೂ ಕೂಡ ಆರ್ಥಿಕವಾಗಿ ಹೊರೆ ಆಗತೆ ಉತ್ತಮ ರೀತಿಯ ಜೀವನ ನೆಡೆಸಬಯಸಿದರೆ ಸರ್ಕಾರದ ಈ ಹೊಸ ನಿಯಮ ತಿಳಿದುಕೊಳ್ಳುವುದು ಬಹಳ ಉತ್ತಮ. ಯಾವುದೇ ರೀತಿಯ ಮಾರುಕಟ್ಟೆಯ ಅಪಾಯವಿಲ್ಲದೆ ಅತಿ ಉತ್ತಮ ಆದಾಯ ನೀಡುವಂತಹ ಯೋಜನೆಗಳು ಸರ್ಕಾರ ಜಾರಿಗೆ ತಂದಿದೆ ಅವುಗಳಲ್ಲಿ ಅಟಲ್ ಜಿ ಪೆನ್ಷನ್ ಯೋಜನೆ ಕೂಡ ಒಂದು ಒಳ್ಳೆಯ ಯೋಜನೆಯಾಗಿದೆ.
ಅಟಲ್ ಜಿ ಪಿಂಚಣಿ ಯೋಜನೆ
ಕೇಂದ್ರ ಸರ್ಕಾರ ಜನರಿಗಾಗಿ ಜಾರಿಗೆ ತಂದಿರುವ ಅಟಲ್ ಜಿ ಪಿಂಚಣಿ ಯೋಜನೆ ಬಹಳ ಉತ್ತಮವಾಗಿರುವ ಹೆಚ್ಚು ಆದಾಯವನ್ನು ನೀಡುವಂತದ್ದು ನೀವು ಎಷ್ಟು ಹೂಡಿಕೆ ಮಾಡುತ್ತೀರೋ ಅಷ್ಟು ತಿಂಗಳಿಗೆ ಪಿಂಚಣಿ ಪಡೆದುಕೊಳ್ಳಬಹುದು. ಹಾಗಾಗಿ ನಿಮಗೆ ಪ್ರತಿ ತಿಂಗಳು ಎಷ್ಟು ಪಿಂಚಣಿ ಬೇಕು ಎನ್ನುವುದನ್ನು ನಿರ್ಧರಿಸಿಕೊಂಡು ಹೂಡಿಕೆ ಮಾಡುವುದು ತುಂಬಾ ಒಳ್ಳೆಯದು.
APY ಪಿಂಚಣಿ ಯೋಜನೆಯ ಲಾಭ ?
2015ರಲ್ಲಿ ಅಟಲ್ ಪಿಂಚಣಿ ಯೋಜನೆಯನ್ನು ಆರಂಭಿಸಲಾಯಿತು. 60 ವರ್ಷದ ನಂತರ ಪ್ರತಿ ತಿಂಗಳು ಸಾವಿರದಿಂದ 5 ಸಾವಿರ ರೂಪಾಯಿಗಳವರೆಗೆ ಪಿಂಚಣಿ ಪಡೆದುಕೊಳ್ಳಲು ಹೂಡಿಕೆ ಮಾಡಬಹುದು. ನೀವು ಎಷ್ಟು ಬೇಗ ಹೂಡಿಕೆ ಆರಂಭಿಸುತ್ತೀರೋ, ಅಷ್ಟೇ ದೊಡ್ಡ ಮೊತ್ತ ನಿಮಗೆ ಪ್ರತಿ ತಿಂಗಳು ಪಿಂಚಣಿಯಾಗಿ ಸಿಗಲಿದೆ. ಅಟಲ್ ಪಿಂಚಣಿ ಯೋಜನೆಯಲ್ಲಿ ಪ್ರತಿ ತಿಂಗಳು ಹೆಚ್ಚು ಮೊತ್ತದ ಪಿಂಚಣಿ ಪಡೆದುಕೊಳ್ಳಲು ಈಗಿನಿಂದಲೇ ಹೂಡಿಕೆ ಆರಂಭಿಸಿ ನೀವು ಕೇವಲ 210ಗಳನ್ನು ಪ್ರತಿ ತಿಂಗಳು ಹೂಡಿಕೆ ಮಾಡಿದರೆ 60 ವರ್ಷಗಳ ನಂತರ ಪ್ರತಿ ತಿಂಗಳು 5000 ಪಿಂಚಣಿ ಪಡೆಯಬಹುದು. ಇದೇ ಯೋಜನೆ ದಂಪತಿಗಳು ಆರಂಭಿಸಿದರೆ 10,000ಗಳ ಪಿಂಚಣಿ ಪಡೆಯಬಹುದಾಗಿದೆ.
ಎಪಿವೈ ನಲ್ಲಿ ಯಾರು ಹೂಡಿಕೆ ಮಾಡಬಹುದು.
18 ರಿಂದ 40 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಹೂಡಿಕೆ ಮಾಡಬಹುದಾಗಿದೆ, ಈ ಹೂಡಿಕೆಯ ಅವಧಿ 20 ವರ್ಷಗಳು. ಕಡಿಮೆ ವಯಸ್ಸಿನಲ್ಲಿ ಹೂಡಿಕೆ ಮಾಡಿದ್ರೆ ಹೂಡಿಕೆಯ ಮೊತ್ತ ಕಡಿಮೆ ಇರುತ್ತದೆ ಹಾಗೂ ವಯಸ್ಸು ಹೆಚ್ಚಾಗುತ್ತಿದ್ದ ಹಾಗೆ ಹೂಡಿಕೆ ಮಾಡುವ ಹಣದ ಪ್ರಮಾಣವೂ ಕೂಡ ಹೆಚ್ಚಾಗುತ್ತದೆ.
ಇನ್ಮುಂದೆ ಕುಡುಕರದ್ದೇ ಆದ ಸಂಘ ಸ್ಥಾಪನೆ.!! ರಾಜ್ಯದಲ್ಲಿ ಹೊಸ ಹವಾ ಆರಂಭ; ನೀವೂ ರಿಜಿಸ್ಟರ್ ಆದ್ರಾ??
APY ಹೂಡಿಕೆ ಆರಂಭಿಸಲು ಬೇಕಾಗಿರುವ ದಾಖಲೆಗಳು
- ಹೂಡಿಕೆ ಮಾಡಲು ಬಯಸುವ ಅರ್ಜಿದಾರರ ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಮೊಬೈಲ್ ಸಂಖ್ಯೆ
- ಗಂಡ-ಹೆಂಡತಿ ಇಬ್ಬರೂ ಹೂಡಿಕೆ ಮಾಡುವುದಾದರೆ ಮ್ಯಾರೇಜ್ ಸರ್ಟಿಫಿಕೇಟ್ ಒದಗಿಸಿಕೊಡಬೇಕಾಗುತ್ತದೆ.
ವಿಶೇಷ ಸೂಚನೆ : ಯಾವುದೇ ಹೂಡಿಕೆದಾರ ಮೃತಪಟ್ಟರೆ ಮಾತ್ರ ಈ ಖಾತೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಹೂಡಿಕೆಯನ್ನು ಅರ್ಧದಲ್ಲಿಯೇ ನಿಲ್ಲಿಸುವಂತಿಲ್ಲ, ಕನಿಷ್ಠ 20 ವರ್ಷಗಳವರೆಗೆ ಹೂಡಿಕೆ ಮುಂದುವರೆಸಬೇಕು. ಹೂಡಿಕೆದಾರ ಮರಣ ಹೊಂದಿದರೆ ಅಥವಾ ದಂಪತಿಗಳಿಬ್ಬರೂ ಮರಣ ಹೊಂದಿದರೆ ನಾಮಿನಿಗೆ ಆ ಹಣವನ್ನು ನೀಡಲಾಗುತ್ತದೆ.