ಹಲೋ ಸ್ನೇಹಿತರೇ, UPI ಅಪ್ಲಿಕೇಶನ್ಗಳನ್ನು ಬಳಸುವ ಬಳಕೆದಾರರಿಗೆ ಜ. 1 ಅತ್ಯಂತ ವಿಶೇಷ ದಿನವಾಗಿದೆ. ಒಂದು ವೇಳೆ ನೀವು 1 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಆನ್ಲೈನ್ ಪಾವತಿಯನ್ನು ಮಾಡದ UPI ಅಪ್ಲಿಕೇಶನ್ ಬಳಸುತ್ತಿದ್ದರೆ, ನಿಮ್ಮ ಖಾತೆಯನ್ನು ಮುಚ್ಚಲಾಗುತ್ತದೆ. ಯಾಕೆ ಮುಚ್ಚಿದರೆ ಏನು ಮಾಡಬೇಕು ಎಂದು ನಮ್ಮ ಲೇಖನದಲ್ಲಿ ತಿಳಿಯಿರಿ.
NPCI ಹೊರಡಿಸಿದ ಸುತ್ತೋಲೆ :
1 ವರ್ಷದಿಂದ ಸಕ್ರಿಯವಾಗಿರದ ಎಲ್ಲಾ UPI ಐಡಿಗಳನ್ನು ಡಿಸೆಂಬರ್ 31, 2023 ರಿಂದ ಮುಚ್ಚಲಾಗುವುದು ಎಂದು NPCI ಹೇಳಿಕೆ ನೀಡಿದೆ. ಈ ಬಗ್ಗೆ NPCI ಸುತ್ತೋಲೆಯನ್ನು ಹೊರಡಿಸಿದೆ. ಟಿಪಿಎಪಿ ಮತ್ತು ಪಿಎಸ್ಪಿ ಬ್ಯಾಂಕ್ಗಳು ಯುಪಿಐ ಐಡಿ ಮತ್ತು ಸಂಬಂಧಿತ ಯುಪಿಐ ಸಂಖ್ಯೆ & 1 ವರ್ಷದ ಅವಧಿಗೆ ಯಾವುದೇ ಹಣಕಾಸು ಅಥವಾ ಹಣಕಾಸೇತರ ವಹಿವಾಟುಗಳನ್ನು ಮಾಡದ ಗ್ರಾಹಕರ ಫೋನ್ ಸಂಖ್ಯೆಯನ್ನು ಗುರುತಿಸುವ ಅಗತ್ಯವಿದೆ ಎಂದು ಮಾರ್ಗಸೂಚಿಯಲ್ಲಿ ಹೊಸಡಿಸಲಾಗಿದೆ. ಒಂದು ಸಲ ಈ ನಂಬರ್ ಗುರುತಿಸಿದ ನಂತರ UPI ಐಡಿ ಮತ್ತು UPI ಸಂಖ್ಯೆಗಳನ್ನು ಆಂತರಿಕ ಕ್ರೆಡಿಟ್ ವಹಿವಾಟುಗಳಿಗಾಗಿ ನಿಷ್ಕ್ರಿಯಗೊಳಿಸಲಾಗುವುದು.
ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಲಾಭರಹಿತ ಸಂಸ್ಥೆಯಾಗಿದೆ. PhonePe, Google Pay & Paytm ನಂತಹ ಎಲ್ಲಾ UPI ಅಪ್ಲಿಕೇಶನ್ಗಳು NPCI ಮಾರ್ಗಸೂಚಿಗಳ ಮೇಲೆ ಕಾರ್ಯನಿರ್ವಹಿಸಲಾಗುವುದು.
ಈ ಅಪ್ಲಿಕೇಶನ್ಗಳ ಮೂಲಕ ಎಲ್ಲಾ ವಹಿವಾಟುಗಳನ್ನು NPCI ನಿಯಂತ್ರಣ ಮಾಡುತ್ತದೆ. ಯಾವುದೇ ರೀತಿಯ ವಿವಾದದ ಸಂದರ್ಭದಲ್ಲಿ NPCI ಸಹ ಮಧ್ಯಸ್ಥಿಕೆ ವಹಿಸಲಿದೆ. UPI ಅಪ್ಲಿಕೇಶನ್ಗಳ ಮೂಲಕ ಎಲ್ಲಾ ವಹಿವಾಟುಗಳು ಸುರಕ್ಷಿತ ಮತ್ತು ಪಾರದರ್ಶಕವಾಗಿರುವುದು ಖಚಿತವಾಗಿದೆ.
NPCI ನಿಯಮಗಳೇನು? :
NPCI ಪ್ರಕಾರ, ಬಳಕೆದಾರರ ಸುರಕ್ಷತೆ ಹೆಚ್ಚಿಗೆ ಮಾಡುವುದು ಈ ಹಂತದ ಉದ್ದೇಶವಾಗಿದೆ. ಅನೇಕ ಬಾರಿ ಬಳಕೆದಾರರು ತಮ್ಮ ಹಳೆಯ ಮೊಬೈಲ್ ಸಂಖ್ಯೆಯನ್ನು ಡಿಲಿಂಕ್ ಮಾಡದೆ ಹೊಸ UPI ಐಡಿಯನ್ನು ರಚನೆ ಮಾಡುತ್ತಾರೆ. ಇದು ಹಳೆಯ ಐಡಿಯನ್ನು ಬಳಸಿಕೊಂಡು ಬೇರೆಯವರು ವಂಚನೆ ಮಾಡುವ ಅಪಾಯ ಹೆಚ್ಚಿಗೆ ಇರುತ್ತದೆ. 1 ವರ್ಷದವರೆಗೆ ಬಳಸದ ಐಡಿಗಳನ್ನು ಮುಚ್ಚುವುದರಿಂದ ಈ ಅಪಾಯವನ್ನು ಕಡಿಮೆ ಮಾಡಬಹುದು ಎಂದು NPCI ನಂಬುತ್ತದೆ.
ಇತರೆ ವಿಷಯಗಳು
ಚಿನ್ನಾಭರಣದಲ್ಲಿ ದಿಢೀರ್ ಇಳಿಕೆ.! ಅಂಗಡಿ ಮುಂದೆ ಜಮಾಯಿಸಿದ ಜನ
ಏರ್ಟೆಲ್ ಹೊಸ ವರ್ಷದ ಕೊಡುಗೆ! ಕೇವಲ ರೂ.148 ವಿಶೇಷ ರೀಚಾರ್ಜ್ ಪ್ಲಾನ್ನಲ್ಲಿ ಬಂಪರ್ ಆಫರ್