ಹಲೋ ಸ್ನೇಹಿತರೇ, ಸ್ಟ್ಯಾಂಡಿಂಗ್ ಆರ್ಡರ್ ನಲ್ಲಿ ಬದಲಾವಣೆ ತರಲು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರಯತ್ನಿಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ, ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ, ಗ್ಯಾರಂಟಿ ಯೋಜನೆಗಲ್ಲಿ ಯುವ ನಿಧಿ ಯೋಜನೆ ಕೂಡ ಒಂದು. ಈ ಯೋಜನೆಯ ಅಡಿಯಲ್ಲಿ ರಾಜ್ಯದಲ್ಲಿ ವಾಸಿಸುತ್ತಿರುವ ನಿರುದ್ಯೋಗಿ ಯುವಕ ಯುವತಿಯರಿಗೆ ಎರಡು ವರ್ಷಗಳ ಕಾಲ ಉಚಿತವಾಗಿ ಧನ ಸಹಾಯ ಹಾಗೂ ನಿರುದ್ಯೋಗ ಭತ್ಯೆ ನೀಡಲು ಸರ್ಕಾರ ತೀರ್ಮಾನಿಸಿದೆ.
ಯುವನಿಧಿ ಬೆನ್ನಲ್ಲೇ ಮತ್ತೊಂದು ಯೋಜನೆ ಜಾರಿ:
ರಾಜ್ಯದಲ್ಲಿ ಯುವ ಜನತೆಯು ನಿರುದ್ಯೋಗಿಗಳಾಗಿದ್ದರೆ ಆರ್ಥಿಕ ಪರಿಸ್ಥಿತಿಯ ಮೇಲೆ ಕೂಡ ಪರಿಣಾಮವನ್ನು ಬೀರುತ್ತದೆ, ಹಾಗಾಗಿ ನಿರುದ್ಯೋಗವನ್ನು ಹೋಗಲಾಡಿಸಲು ಸರ್ಕಾರ ಶತಾಯಗತಾಯ ಪ್ರಯತ್ನಿಸುತ್ತಿದೆ ಎನ್ನಬಹುದು.
ಇದೇ ಕಾರಣಕ್ಕೆ ಈಗ ಸ್ಟ್ಯಾಂಡಿಂಗ್ ಆರ್ಡರ್ ಒಂದನ್ನು ಉದ್ಯೋಗದ ವಿಚಾರದಲ್ಲಿ ತರಲು ನಿರ್ಧರಿಸಲಾಗಿದ್ದು ಇದರಿಂದ ಕೋಟ್ಯಂತರ ಕನ್ನಡಿಗರಿಗೆ ಪ್ರಯೋಜನವು ಆಗಲಿದೆ ಎಂದು ತಿಳಿಸಿದ್ದಾರೆ.
ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ:
ಯಾವುದೇ ಖಾಸಗಿ ಉದ್ಯೋಗವಾಗಿರಲಿ ಅಥವಾ ಸರ್ಕಾರಿ ಹುದ್ದೆಗಳು ಆಗಿರಲಿ ಕನ್ನಡಿಗರಿಗೆ ಹಾಗೂ ವಿಕಲಚೇತನರಿಗೆ ಮೀಸಲಾತಿ ನೀಡಲು ಸರ್ಕಾರ ನಿರ್ಧರಿಸಿದೆ.
ಕಾರ್ಮಿಕ ವಿದ್ಯಾರ್ಥಿವೇತನ: ಎಲ್ಲರಿಗೂ ಸರ್ಕಾರದಿಂದ ₹35,000 ಉಚಿತ.! ಬೇಗನೆ ಅಪ್ಲೇ ಮಾಡಿ
ರಾಜ್ಯದಲ್ಲಿ ಯಾವುದೇ ಉದ್ಯೋಗ ಸೃಷ್ಟಿ ಆದದ್ರೂ ಕೂಡ ಕನ್ನಡಿಗರಿಗೆ ಮತ್ತು ಅಂಗವಿಕಲತೆ ಹೊಂದಿರುವವರಿಗೆ ಮೀಸಲಾತಿ ನೀಡಬೇಕು ಎನ್ನುವ ಸ್ಟ್ಯಾಂಡಿಂಗ್ ಆರ್ಡರ್ನಲ್ಲಿ ಬದಲಾವಣೆ ತರಲು ನಿರ್ಧರಿಸಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಶೀರ್ಘದಲ್ಲಿಯೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮಾಹಿತಿಯನ್ನು ನೀಡಿದ್ದಾರೆ.
ಸಾಮಾನ್ಯವಾಗಿ ಕನ್ನಡಿಗರಿಗೆ ಕರ್ನಾಟಕದಲ್ಲಿ ಉದ್ಯೋಗ ಸಿಗುವುದು ಕಷ್ಟವಾಗುತ್ತದೆ. ಅದರಲ್ಲೂ ಖಾಸಗಿ ವಲಯದ ಕಂಪನಿಗಳು ಕನ್ನಡಿಗರಿಗೆ ವಿಶೇಷವಾದ ಬೆಲೆ ಕೊಡುವುದಿಲ್ಲ ಎನ್ನುವ ಕಾರಣಕ್ಕೆ ಈಗ ಹೊಸ ನಿರ್ಧಾರವನ್ನೂ ಸರ್ಕಾರ ಕೈಗೊಂಡಿದ್ದು ಸದ್ಯದಲ್ಲಿಯೇ ರಾಜ್ಯದಲ್ಲಿ ಯಾವುದೇ ಖಾಸಗಿ ಹಾಗೂ ಸರ್ಕಾರಿ ಹುದ್ದೆಗಳಿಗೆ ಕನ್ನಡಿಗರು ಕೂಡ ವಿಶೇಷವಾಗಿ ಅರ್ಜಿ ಸಲ್ಲಿಸಿ ಮೀಸಲಾತಿ ಆಧಾರದ ಮೇಲೆ ಉದ್ಯೋಗ ಪಡೆದುಕೊಳ್ಳಬಹುದು ಎಂದು ಸರ್ಕಾರವು ತಿಳಿಸಿದೆ.
ಈ ಒಂದು ಯೋಜನೆ ಕಡ್ಡಾಯವಾಗಿ ಜಾರಿಗೆ ಬಂದರೆ ರಾಜ್ಯದಲ್ಲಿ ಲಕ್ಷಾಂತರ ಕನ್ನಡಿಗ ಯುವಕ ಯುವತಿಯರು ಸುಲಭವಾಗಿ ಕೆಲಸ ಗಿಟ್ಟಿಸಿಕೊಳ್ಳಬಹುದು. ಇದರಿಂದ ಉದ್ಯೋಗ ಸೃಷ್ಟಿ ಹಾಗೂ ಉದ್ಯೋಗ ಸಮಸ್ಯೆ ಕೂಡ ನಿರ್ಮೂಲನೆಗೊಳ್ಳಲು ಸಹಾಯವಾಗುತ್ತದೆ.
ಇತರೆ ವಿಷಯಗಳು:
ಮಹಿಳೆಯರ ಕಲ್ಯಾಣಕ್ಕಾಗಿ ಇನ್ನೊಂದು ಯೋಜನೆ.! ಪ್ರತಿ ಮಹಿಳೆಯರ ಖಾತೆಗೆ ಕೇಂದ್ರದಿಂದ ನಗದು ವರ್ಗಾವಣೆ
ಆನ್ಲೈನ್ ಕಳ್ಳರಿದ್ದಾರೆ ಹುಷಾರ್.!! ಈ ಮೆಸೇಜ್ ಬಂದ್ರೆ ಅಪ್ಪಿ ತಪ್ಪಿನು ಓಪನ್ ಮಾಡ್ಬೇಡಿ