rtgh

ಗೃಹಲಕ್ಷ್ಮಿಯರಿಗೆ ಪ್ರತಿ ತಿಂಗಳು ತಪ್ಪದೆ ಹಣ ಬೇಕಾ.?? ಹಾಗಾದ್ರೆ ಈ ಕೆಲಸ ಮಾಡಿ

ಹಲೋ ಸ್ನೇಹಿತರೇ, ಕರ್ನಾಟಕ ರಾಜ್ಯ ಇಂದು ಇತರ ರಾಜ್ಯಗಳಿಗೂ ಕೂಡ ಮಾದರಿಯಾಗಿದೆ. ಉದಾಹರಣೆಗೆ ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಯಶಸ್ವಿಯಾಗಿದ್ದು ಬೇರೆ ರಾಜ್ಯದ ಸರ್ಕಾರವೂ ಕೂಡ ಯೋಜನೆಗಳನ್ನು ಅನುಸರಿಸುತ್ತಿದೆ ಎನ್ನಬಹುದು.

gruha lakshmi scheme

ವಿಧಾನಸಭಾ ಚುನಾವಣೆಗೆ ಮುನ್ನ ತನ್ನ ಪ್ರಣಾಳಿಕೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಪಕ್ಷ ಘೋಷಿಸಿತ್ತು. ಅದೇ ಪ್ರಕಾರವಾಗಿ ಗೃಹಲಕ್ಷ್ಮಿ ಯೋಜನೆ ಹಾಗೂ ಇತರ ನಾಲ್ಕು ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದವು.

ಇದೀಗ ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆಯ ಮಾದರಿಯಲ್ಲಿ ತೆಲಂಗಾಣದಲ್ಲಿ ಮಹಾಲಕ್ಷ್ಮಿ ಯೋಜನೆಯನ್ನು ಕೂಡ ಆರಂಭಿಸಲಾಗಿದೆ. ಅಂದರೆ ಅಷ್ಟರಮಟ್ಟಿಗೆ ಯೋಜನೆ ಫಲ ಕೊಟ್ಟಿದೆ ಎನ್ನಬಹುದು.

ಸಾಮಾನ್ಯವಾಗಿ ಮನೆಯಲ್ಲಿಯೇ ಇದ್ದು ಮನೆಯ ಕೆಲಸ ಮಾಡುವ ಮಹಿಳೆಯರಿಗೆ ತುರ್ತು ಖರ್ಚಿಗಾಗಿ ಹಣದ ಅವಶ್ಯಕತೆ ಇರುತ್ತದೆ. ಇದಕ್ಕಾಗಿ ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಯ ಮೂಲಕ 2,000 ರೂ.ಗಳ ನೆರವು ಸಿಗುತ್ತಿದೆ. ಈಗಾಗಲೇ ಐದು ಕಂತಿನ ಹಣ ಬಿಡುಗಡೆ ಆಗಿದ್ದು, ಒಟ್ಟಾರೆಯಾಗಿ 10,000 ಫಲಾನುಭವಿ ಮಹಿಳೆಯರ ಖಾತೆಗೆ ವರ್ಗಾವಣೆ ಆಗಿದೆ.

5ನೇ ಕಂತಿನ ಹಣ ಬಿಡುಗಡೆ

ರಾಜ್ಯ ಸರ್ಕಾರ ಈಗಾಗಲೇ ತಿಳಿಸಿರುವಂತೆ ಪ್ರತಿ ತಿಂಗಳು 20ನೇ ತಾರೀಕಿನ ಒಳಗೆ ಪ್ರತಿ ಕಂತಿನ ಹಣ ಜಮಾ ಆಗುತ್ತದೆ. ಅದೇ ರೀತಿಯಾಗಿ ಈಗ 5ನೇ ಕಂತಿನ ಹಣವನ್ನು ಕೂಡ ಸರ್ಕಾರ ಬಿಡುಗಡೆ ಮಾಡಿದೆ. ಈಗಾಗಲೇ ಹಲವು ಜಿಲ್ಲೆಗಳಿಗೆ ಹಣ ವರ್ಗಾವಣೆ ಆಗಿದ್ದು, ಹಲವು ಮಹಿಳೆಯರು ಪ್ರಯೋಜನ ಪಡೆದುಕೊಂಡಿದ್ದಾರೆ. ಇನ್ನೂ ಸಾಕಷ್ಟು ಜನರಿಗೆ 5 ನೇ ಕಂತಿನ ಹಣ ಜಮಾವಾಗುವುದು ಬಾಕಿ ಇದೆ.


ಈ ಲಿಸ್ಟ್ ನಲ್ಲಿ ಹೆಸರು ಇಲ್ದೇ ಇದ್ರೆ ಹಣ ಬರುವುದಿಲ್ಲ

ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯಡಿಯಲ್ಲಿ ಫಲಾನುಭವಿಗಳ ಖಾತೆಗೆ ಸರಕಾರ ನೇರವಾಗಿ ಹಣವನ್ನು ವರ್ಗಾವಣೆ ಮಾಡುತ್ತಿದೆ. ಆದ್ರೆ ಹಣಕಾಸು ಖರ್ಚು ವೆಚ್ಚಗಳು ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ತಿಳಿಸಿದ್ದಾರೆ.

ಯಾಕಂದ್ರೆ ಎರಡು ಯೋಜನೆಗಳಿಗೆ ಹಣ ವರ್ಗಾವಣೆ ಮಾಡಲು ಸರ್ಕಾರಕ್ಕೆ ಅತಿ ಹೆಚ್ಚಿನ ಹಣ ಬೇಕು, ಹಾಗಾಗಿ ಫಲಾನುಭವಿಗಳಿಗೆ ಹಣ ವರ್ಗಾವಣೆ ಮಾಡುವ ಸಲುವಾಗಿ ರೇಷನ್ ಕಾರ್ಡ್ ನಲ್ಲಿ ಇರುವ ಅಕ್ರಮ ತಡೆಗಟ್ಟಲು ಸರ್ಕಾರ ಮುಂದಾಗಿದೆ.

ಕಾರ್ಮಿಕ ವಿದ್ಯಾರ್ಥಿವೇತನ: ಎಲ್ಲರಿಗೂ ಸರ್ಕಾರದಿಂದ ₹35,000 ಉಚಿತ.! ಬೇಗನೆ ಅಪ್ಲೇ ಮಾಡಿ

ಇದೇ ಕಾರಣಕ್ಕೆ ಇಂದು ಸಾಕಷ್ಟು ರೇಷನ್ ಕಾರ್ಡ್ ಗಳು ರದ್ದಾಗಿದ್ದು, ನೀವು ನಿಮ್ಮ ಹೆಸರು ಇದ್ಯೋ ಇಲ್ಲವೋ ಎನ್ನುವುದನ್ನು ಚೆಕ್ ಮಾಡಿಕೊಳ್ಳಿ. ಒಂದು ವೇಳೆ ನಿಮ್ಮ ಹೆಸರು ಇಲ್ಲದೆ ಇದ್ದರೆ, ಗೃಹಲಕ್ಷ್ಮಿ ಯೋಜನೆಯ ಹಣ ಅಥವಾ ಅನ್ನಭಾಗ್ಯ ಯೋಜನೆಯ ಹಣ ಪಡೆದುಕೊಳ್ಳಲು ಸಾಧ್ಯವಿಲ್ಲ.

ಹಳ್ಳಿಪಟ್ಟಿ ಚೆಕ್ ಮಾಡಿ

https://ahara.kar.nic.in/Home/EServices ಅಧಿಕೃತ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ. ಮುಖಪುಟದಲ್ಲಿ ಎಡ ಭಾಗದಲ್ಲಿ ಕಾಣುವ ಮೂರು ಲೈನ್ ಮೇಲೆ ಕ್ಲಿಕ್ ಮಾಡಿ.

ಈಗ E -ration card ಆಯ್ಕೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿದರೆ ಶೋ ವಿಲೇಜ್ ಲಿಸ್ಟ್ ಎನ್ನುವ ಆಯ್ಕೆ ಕಾಣಿಸುತ್ತಿದೆ, ಅದರ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜಿಲ್ಲೆ ತಾಲೂಕು ಗ್ರಾಮ ಪಂಚಾಯತ್ ಹಾಗೂ ಹಳ್ಳಿ ಆಯ್ಕೆ ಮಾಡಬೇಕು. ನಂತರ ಗೋ ಎಂದು ಕ್ಲಿಕ್ ಮಾಡಿದ್ರೆ, ರೇಷನ್ ಕಾರ್ಡ್ ದಾರದ ಹೆಸರು ಕಾಣಿಸುತ್ತದೆ. ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಕೂಡ ಇದ್ದರೆ ಮಿಸ್ ಆಗದೆ ಮುಂದಿನ ಕಂತಿನ ಹಣ ಕೂಡ ಖಾತೆಗೆ ಜಮಾ ಆಗುತ್ತದೆ.

ಡಿಬಿಟಿ ಸ್ಟೇಟಸ್ ಚೆಕ್ ಮಾಡಿ

ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಆಗಿದೆಯೋ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳಲು ಕರ್ನಾಟಕ ಸರ್ಕಾರ, DBT Karnataka ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಈ ಅಪ್ಲಿಕೇಶನ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಂಡು, ಆಧಾರ್ ಸಂಖ್ಯೆಯನ್ನು ಹಾಕಿ ಲಾಗಿನ್ ಆಗಿ. ಬಳಿಕ ನಿಮ್ಮ ಗೃಹಲಕ್ಷ್ಮಿ ಹಣ ಖಾತೆಗೆ ಎಷ್ಟು ಜಮಾ ಆಗಿದೆ ಎಂಬುದನ್ನ ತಿಳಿದುಕೊಳ್ಳಬಹುದು.

ಮಹಿಳೆಯರ ಕಲ್ಯಾಣಕ್ಕಾಗಿ ಇನ್ನೊಂದು ಯೋಜನೆ.! ಪ್ರತಿ ಮಹಿಳೆಯರ ಖಾತೆಗೆ ಕೇಂದ್ರದಿಂದ ನಗದು ವರ್ಗಾವಣೆ

ಆನ್ಲೈನ್‌ ಕಳ್ಳರಿದ್ದಾರೆ ಹುಷಾರ್.!!‌ ಈ ಮೆಸೇಜ್‌ ಬಂದ್ರೆ ಅಪ್ಪಿ ತಪ್ಪಿನು ಓಪನ್‌ ಮಾಡ್ಬೇಡಿ

Leave a Comment