rtgh

ಸಿಬಿಲ್ ಸ್ಕೋರನ್ನು ಜಾಸ್ತಿ ಮಾಡುವ ಟ್ರಿಕ್ಸ್ ಇಲ್ಲಿದೆ : ಸಾಲಕ್ಕೆ ಅರ್ಜಿ ಹಾಕುವಾಗ ಇದನ್ನು ಬಳಸಿ

ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರೂ ಕ್ರೆಡಿಟ್ ಕಾರ್ಡ್ ಅನ್ನು ಬಳಸುತ್ತೇವೆ ಆದರೆ ಅದರ ಕ್ರೆಡಿಟ್ ಸ್ಕೋರ್ ಬಗ್ಗೆ ಸಾಮಾನ್ಯವಾಗಿ ನಮಗೆ ಹೆಚ್ಚಿನ ಮಾಹಿತಿ ತಿಳಿದಿರುವುದಿಲ್ಲ. ಕ್ರೆಡಿಟ್ ಕಾರ್ಡ್ ಅನ್ನು ಬಳಸುತ್ತಿದ್ದೇವೆ ಎಂದರೆ ಅದರಲ್ಲಿ ನಾವು ಕ್ರಿಕೆಟ್ ಸ್ಕೋರ್ನ ಬಗ್ಗೆಯೂ ಸಹ ಅಷ್ಟೇ ಗಮನ ಹರಿಸಬೇಕಾಗುತ್ತದೆ. ಈ ಕ್ರೆಡಿಟ್ ಸ್ಕೋರ್ ನಿಂದ ಏನೆಲ್ಲ ಉಪಯೋಗವಾಗಲಿದೆ ಎಂಬುದರ ಬಗ್ಗೆ ಇವತ್ತಿನ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಾಗುತ್ತಿದೆ.

Here are the tricks to increase Sybil score
Here are the tricks to increase Sybil score

ಕ್ರೆಡಿಟ್ ಸ್ಕೋರ್ ಎಂದರೇನು ?

ಪರಿಪೂರ್ಣವಾಗಿ ನೀವೇನಾದರೂ ಸಾಲವನ್ನು ಪಡೆದುಕೊಂಡಿದ್ದರೆ ಅದನ್ನು ಮರುಪಾವತಿ ಮಾಡುವಂತಹ ಸಾಮರ್ಥ್ಯ ನಿಮ್ಮಲ್ಲಿ ಇದೆಯೇ ಇಲ್ಲವೇ ಎಂಬುದನ್ನು ನೋಡುವುದನ್ನೇ ಕ್ರೆಡಿಟ್ ಸ್ಕೋರ್ ಎಂದು ಕರೆಯಲಾಗುತ್ತದೆ. ಸಂಖ್ಯಾ ಪ್ರಾತಿನಿಧ್ಯವನ್ನು ಸಿಬಿಲ್ ಸ್ಕೋರ್ ಹೊಂದಿರುತ್ತದೆ. ಸಾಮಾನ್ಯವಾಗಿ ಸಿವಿಲ್ ಸ್ಕೋರ್ 300 ರಿಂದ 900 ಶ್ರೇಣಿಯವರಿಗೆ ಭಾರತದಲ್ಲಿ ಇರುತ್ತದೆ. ನಾವೇನಾದರೂ ಉತ್ತಮವಾದ ಕ್ರೆಡಿಟ್ ಸ್ಕೋರ್ ಹೊಂದಿರುವುದು ಖಂಡಿತವಾಗಿಯೂ ನಾವು ಅದರಿಂದ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ನಿಮಗೆ ಬೇಕಾದ ರೀತಿಯಲ್ಲಿ ಸಾಲಗಳನ್ನು ಅಥವಾ ಹೊಸ ಸಾಲಗಳಿಗೆ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದಾಗ ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ.

750ಕ್ಕಿಂತ ಕ್ರೆಡಿಟ್ ಸ್ಕೋರ್ ಹೆಚ್ಚಿದ್ದರೆ ಉತ್ತಮ ಸ್ಕೋರೆಂದು ಅದನ್ನು ಪರಿಗಣಿಸಲಾಗುತ್ತದೆ. ವೇಗವಾಗಿ ಸಾಲವನ್ನು ಉತ್ತಮ ಕ್ರೆಡಿಟ್ ಸ್ಕೋರ್ ಅನುಮೋದಿಸುವುದಲ್ಲದೆ ಕೈಗೆಟುಕುವ ಬಡ್ಡಿ ದರದಲ್ಲಿ ಸಾಲಗಾರನಿಗೆ ಹಾಗೂ ಮರುಪಾವತಿ ಸೇರಿದಂತೆ ಸಾಕಷ್ಟು ನಿಯಮಗಳು ಹಾಗೂ ಷರತ್ತುಗಳಿಗಾಗಿ ಮಾತುಕತೆ ನಡೆಸುವಂತಹ ಪವರ್ ಅನ್ನು ಇದು ಒದಗಿಸುತ್ತದೆ. ಸಾಲ ಪಡೆಯುವ ಸಂದರ್ಭದಲ್ಲಿ ಕಡಿಮೆ ಕ್ರೆಡಿಟ್ ಸ್ಕೋರನ್ನು ನೀವು ಹೊಂದಿದ್ದರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಕ್ರೆಡಿಟ್ ಸ್ಕೋರನ್ನು ಮೈನ್ಟೈನ್ ಮಾಡುವ ವಿಧಾನ :

ನೀವೇನಾದರೂ ಕ್ರೆಡಿಟ್ ಸ್ಕೋರನ್ನು ಮೈನ್ಟೈನ್ ಮಾಡಲು ಬಯಸುತ್ತಿದ್ದರೆ ಈ ರೀತಿಯಾಗಿ ಮೇನ್ಟೇನ್ ಮಾಡಬಹುದಾಗಿದೆ ಅದು ಹೇಗೆಂದರೆ,

  1. ಬಿಲ್ ಗಳನ್ನು ನಿಗದಿತ ಸಮಯಕ್ಕೆ ಪಾವತಿಸಿ

ಬಿಲ್ಗಳು ಮತ್ತು ಲೋನ್ ಈಎಂಐಗಳ ಸಕಾಲಿಕ ಪಾವತಿಯನ್ನು ಕ್ರೆಡಿಟ್ ಕಾರ್ಡ್ ಮೂಲಕ ಖಚಿತಪಡಿಸಿಕೊಳ್ಳಿ. ನಿಮ್ಮ ಸ್ಕೋರ್ ಮೇಲೆ ವಿಳಂಬವಾದ ಪಾವತಿಗಳು ಪರಿಣಾಮವನ್ನು ಬೀರಬಹುದು ಹಾಗಾಗಿ ರಿಮೈಂಡರ್ ಗಳನ್ನು ಹೊಂದಿಸುವ ಮೂಲಕ ಅಥವಾ ಸ್ವಯಂ ಚಾಲಿತ ಮರುಪಾವತಿಯನ್ನು ಮೊಬೈಲ್ ನಲ್ಲಿ ಸಕ್ರಿಯಗೊಳಿಸಿ ಪಾವತಿಯನ್ನು ಕಳೆದುಕೊಳ್ಳುವುದನ್ನು ಇದು ತಪ್ಪಿಸಲು ಹೆಚ್ಚು ಸಹಾಯ ಮಾಡುತ್ತದೆ ಈ ಮೂಲಕವಾಗಿ ನೀವು ನಿಗದಿತ ಸಮಯಕ್ಕೆ ಬಿಲ್ ಗಳನ್ನು ಪಾವತಿಸಬಹುದಾಗಿದೆ.


  1. ಕಡಿಮೆಯಾಗಿ ಕ್ರೆಡಿಟ್ ಬಳಕೆಯನ್ನು ಮಾಡಿ :

ಕ್ರೆಡಿಟ್ ಕಾರ್ಡ್ ಕಂಪನಿಗಳು ತುರ್ತು ಪರಿಸ್ಥಿತಿ ಗಾಗಿ ಕ್ರೆಡಿಟ್ ಕಾರ್ಡ್ ಗಳಲ್ಲಿ ಹೆಚ್ಚುವರಿ ಬ್ಯಾಲೆನ್ಸ್ ಅನ್ನು ಒದಗಿಸುತ್ತಾರೆ. ಆ ಸಂದರ್ಭದಲ್ಲಿ ನೀವು ಕ್ರೆಡಿಟ್ ಸ್ಕೋರನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳಲು 30% ಗಿಂತ ಕಡಿಮೆ ಕ್ರೆಡಿಟ್ ಬಳಕೆಯನ್ನು ಇರಿಸಿಕೊಳ್ಳಲು ಪ್ರಯತ್ನಿಸಿ. ಉದಾಹರಣೆಗೆ ಕ್ರೆಡಿಟ್ ಲಿಮಿಟ್ ನಿಮ್ಮ ಬಳಿ 5 ಲಕ್ಷ ರೂಪಾಯಿಗಳ ವರೆಗೆ ಇದ್ದರೆ ಅದನ್ನು ನೀವು 4.50 ಲಕ್ಷ ಅಥವಾ 5 ಲಕ್ಷದವರೆಗೆ ಖರ್ಚು ಮಾಡಿದ್ದರೆ ಅದು ನಿಮ್ಮ ಕ್ರೆಡಿಟ್ ಸ್ಕೋರ್ನ ಮೇಲೆ ಪರಿಣಾಮ ಬೀರುತ್ತದೆ ಹಾಗಾಗಿ ನೀವು 30% ಗಿಂತ ಕ್ರೆಡಿಟ್ ಲಿಮಿಟ್ ಅನ್ನು ಕಡಿಮೆ ಇರಿಸಿಕೊಳ್ಳಲು ಪ್ರಯತ್ನಿಸ ಬೇಕಾಗುತ್ತದೆ.

ಸಾಲ ಮರುಪಾವತಿ ಮಾಡುವುದು :

ಯಾವುದೇ ರೀತಿಯ ಸಾಲವನ್ನು ಈಗಾಗಲೇ ಪಡೆದಿದ್ದಾರೆ ಸಕಾಲಿಕ ಸಮಯಕ್ಕೆ ಸಾಲವನ್ನು ಮರುಪಾವತಿಸಿ ಇಲ್ಲದಿದ್ದರೆ ಇದು ನಿಮ್ಮ ಕ್ರೆಡಿಟ್ ಸ್ಕೋರ್ನ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ. ಹೀಗಾಗಿ ನೀವು ಸಾಲವನ್ನು ಪಡೆಯುವ ಮುಂಚೆ ಮರುಪಾವತಿಸುವ ಸಾಮರ್ಥ್ಯವನ್ನು ಹೊಂದಿದ್ದಾಗ ಮಾತ್ರ ಸಾಲವನ್ನು ಪಡೆಯಿರಿ. ಇಲ್ಲದಿದ್ದರೆ ಇದು ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಆಗುವಂತಹ ಸಾಧ್ಯತೆ ಇರುತ್ತದೆ.

ಕಠಿಣ ವಿಚಾರಣೆಗಳನ್ನು ಮಿತಗೊಳಿಸಿ :

ನೀವು ಕ್ರೆಡಿಟ್ ಕಾರ್ಡ್ ಅಥವಾ ಸಾಲಕ್ಕಾಗಿ ಅರ್ಜಿಯನ್ನು ಸಲ್ಲಿಸಿದಾಗ ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ವಿಚಾರಣೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಇದನ್ನು ಕಠಿಣ ವಿಚಾರಣೆ ಎಂದು ಸಹ ಕರೆಯಲಾಗುತ್ತದೆ. ನೀವೇನಾದರೂ ಪದೇ ಪದೇ ಕಠಿಣ ವಿಚಾರಣೆಗಳನ್ನು ಸಲ್ಲಿಸುತ್ತಿದ್ದರೆ ಇದು ನಿಮ್ಮ ಕ್ರೆಡಿಟ್ ಸ್ಕೋರ್ನ ಮೇಲೆ ಪರಿಣಾಮವನ್ನು ಬೀರುತ್ತದೆ ಹಾಗಾಗಿ ಅಗತ್ಯವಿದ್ದಾಗ ಮಾತ್ರ ವಿಚಾರಣೆ ಅರ್ಜಿ ಸಲ್ಲಿಸಬೇಕಾಗುತ್ತದೆ ಅನಾವಶ್ಯಕವಾಗಿ ಕ್ರೆಡಿಟ್ ಕಾರ್ಡ್ ವಿಚಾರಣೆಗೆ ಪ್ರತಿಬಾರಿಯೂ ಅರ್ಜಿ ಸಲ್ಲಿಸುವುದನ್ನು ತಪ್ಪಿಸಿ.

ಎಲ್ಲಾ ಕ್ರೆಡಿಟ್ ಕಾರ್ಡ್ಗಳನ್ನು ನಿರ್ವಹಿದುವುದು :

ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ಗಳನ್ನು ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಅನ್ವಯಿಸಬಹುದು ಅದು ನಿಮ್ಮಲ್ಲಿ ಕ್ರೆಡಿಟ್ ಕಾರ್ಡ್ಗಳನ್ನು ನಿರ್ವಹಿಸುವಂತಹ ಸಾಮರ್ಥ್ಯವಿದ್ದಾಗ ಮಾತ್ರ ಇಲ್ಲದಿದ್ದರೆ ಋಣಾತ್ಮಕ ಪರಿಣಾಮವನ್ನು ನೀವು ಕ್ರೆಡಿಟ್ ಸ್ಕೋರ್ನ ಮೇಲೆ ಕಾಣಬಹುದಾಗಿದೆ. ಹಾಗಾಗಿ ನಿಮ್ಮ ಸಾಮರ್ಥ್ಯಕ್ಕೆ ಮೀರಿ ಹೆಚ್ಚಿನ ಕ್ರೆಡಿಟ್ ಕಾರ್ಡ್ಗಳನ್ನು ಪಡೆಯದೆ ಒಂದಕ್ಕಿಂತ ಹೆಚ್ಚು ಅನ್ವಯಿಸುವುದನ್ನು ತಪ್ಪಿಸಿ.

ಹೀಗೆ ಈ ಮೇಲಿನ ಟಿಪ್ಸ್ಗಳನ್ನು ಅನುಸರಿಸುವುದರ ಮೂಲಕ ಕ್ರೆಡಿಟ್ ಅಭ್ಯಾಸಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿ ನಿಮ್ಮ ಕ್ರೆಡಿಟ್ ಅರ್ಹತೆಯನ್ನು ಸ್ಥಿರವಾಗಿ ನೀವು ಹೆಚ್ಚಿಸಬಹುದು ಮತ್ತು ಹಣಕಾಸಿನ ಅವಕಾಶಗಳನ್ನು ಉತ್ತಮವಾಗಿ ಪ್ರವೇಶಿಸಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಯಾರಾದರೂ ಹೆಚ್ಚು ಕ್ರೆಡಿಟ್ ಕಾರ್ಡ್ಗಳನ್ನು ಉಪಯೋಗಿಸುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

Leave a Comment