ನಮಸ್ಕಾರ ಸ್ನೇಹಿತರೆ ಎಲ್ಲ ಮಹಿಳೆಯರಿಗೂ ಇದೀಗ ಸಿಹಿ ಸುದ್ದಿ ಎಂದು ಬಂದಿದೆ ರಾಜ್ಯ ಸರ್ಕಾರದಿಂದ ಕರ್ನಾಟಕದ ಮಹಿಳೆಯರಿಗೆ ಸ್ವಯಂ ಉದ್ಯೋಗ ಮಾಡಲು ಮತ್ತು ಅವರು ತಮ್ಮ ಜೀವನವನ್ನು ಸಾಗಿಸಲು ಆರ್ಥಿಕ ಸಹಾಯ ಮಾಡಲು ರಾಜ್ಯ ಸರ್ಕಾರ ಧನ ಸಹಾಯ ಮಾಡುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸವಲೀಕರಣ ಇಲಾಖೆ ಪ್ರಕಟಣೆಯನ್ನು ಹೊರಡಿಸಿರುವುದು ಗಮನಿಸಬೇಕಾಗುತ್ತದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಕಂಡಂತೆ ತಿಳಿಯೋಣ.
2023 24 ನೇ ಸಾಲಿನಲ್ಲಿ 18 ವರ್ಷದಿಂದ 55 ವರ್ಷದೊಳಗಿನ ನಿರುದ್ಯೋಗಿ ಮಹಿಳೆಯರಿಗೆ ಉದ್ಯೋಗಕ್ಕಾಗಿ ಮತ್ತು ಅವರ ಜೀವನ ಸಾಗಿಸುವುದಕ್ಕಾಗಿ ಸರ್ಕಾರ ಸಹಾಯಧನ ನೀಡಲು ಮುಂದಾಗಿದೆ. ಈ ಸಹಾಯಧನ ಪಡೆದುಕೊಳ್ಳಲು ಮಹಿಳೆಯರು ಕೂಡಲೇ ಅರ್ಜಿ ಸಲ್ಲಿಸಬೇಕು.
ಸಹಾಯಧನ ಯೋಜನೆ ಅಡಿಯಲ್ಲಿ ಹಲವಾರು ಯೋಜನೆಗಳು ಇವೆ ಆ ಯೋಜನೆಗಳೆಂದರೆ:
ಯೋಗಿನಿ ಯೋಜನೆ :
ಈ ಯೋಜನೆಯಲ್ಲಿ ಮಹಿಳೆಯರು ಆದಾಯ ಬರುವ ಚಟುವಟಿಕೆಗಳನ್ನು ಆರಂಭಿಸಬೇಕು ತಾವು ತೊಡಗಿಸಿಕೊಂಡು ಅವರು ಸ್ವಂತ ಉದ್ಯೋಗಿಗಳಾಗಲು ಬ್ಯಾಂಕುಗಳ ಮೂಲಕ ಸಾಲದ ರೂಪದಲ್ಲಿ ಅವರಿಗೆ ಸಹಾಯಧನ ನೀಡಲಾಗುವುದು .ಇದಕ್ಕೆ ವಯೋಮಿತಿ 18 ರಿಂದ 55 ವರ್ಷ ಆಗಿರುತ್ತದೆ.
ಈ ಯೋಜನೆಯ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳು ಹಾಗೂ ಸಾಮಾನ್ಯ ವರ್ಗದವರಿಗೂ ಸಹ ಸಹಾಯಧನ ಇದೆ .ಅವುಗಳೆಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಫಲಾನುಭವಿಯ ಆದಾಯದ ಮಿತಿ 2 ಲಕ್ಷ ರೂಪಾಯಿ ಆಗಿದ್ದರೆ .ಘಟಕ ವೆಚ್ಚಕ್ಕೆ ಕನಿಷ್ಠ ಒಂದು ಲಕ್ಷದಿಂದ ಮೂರು ಲಕ್ಷದವರೆಗೂ ಸಹಾಯಧನ ಶೇಕಡ 50ರಷ್ಟು ಇರುತ್ತದೆ. ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಆದಾಯದ ಮಿತಿ ಇದ್ದು ಒಂದುವರೆ ಲಕ್ಷ ರೂಪಾಯಿಗಳು ಹಾಗೂ ಇವರಗೆ ಘಟಕ ನಿರ್ಮಾಣಕ್ಕೆ ಗರಿಷ್ಠ ಮೂರು ಲಕ್ಷ ರೂಪಾಯಿಗಳು ಇದರಲ್ಲಿ ಸಹಾಯ ಧನ ಶೇಕಡ 30ರಷ್ಟು.
ಚೇತನ ಯೋಜನೆ:
ಈ ಯೋಜನೆಯ ಮೂಲಕ ಚೇತನ ಯೋಜನೆಯಲ್ಲಿ ಮಹಿಳೆಯರಿಗೆ ಅವರ ಚಟುವಟಿಕೆಗಳಿಗೆ ಬೇಕಾದ ಆರ್ಥಿಕ ಸಹಾಯವನ್ನು 30,000 ಹಣವನ್ನು ಪ್ರೋತ್ಸಾಹ ಧನವಾಗಿ ನೀಡಲಾಗುವುದು ಇದಕ್ಕೆ ವಯೋಮಿತಿ 18 ವರ್ಷ ಆಗಿರಬೇಕಾಗುತ್ತದೆ.
ಧನಶ್ರೀ ಯೋಜನೆ:
ಈ ಯೋಜನೆಯಲ್ಲಿ ಮಹಿಳೆಯರು ಸ್ವಯಂ ಉದ್ಯೋಗವನ್ನು ಸ್ಥಾಪನೆ ಮಾಡಲು 30,000 ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ ಹಾಗೂ ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಬೇಕಾದರೆ ಮಹಿಳೆಯರಿಗೆ 18 ರಿಂದ 60 ವರ್ಷ ಒಳಗಿನವರ ಆಗಿರಬೇಕು.
ಇದನ್ನು ಓದಿ : ಉಚಿತ ಹೊಲಿಗೆ ಯಂತ್ರ ವಿತರಣೆ : ಆನ್ಲೈನ್ ನಲ್ಲಿ ಅಪ್ಲೈ ಮಾಡಿ
ಪುನರ್ವಸತಿ ಯೋಜನೆ:
ಈ ಯೋಜನೆಯಲ್ಲಿ ಅಲ್ಪಸಂಖ್ಯಾತರು ಪುನರ್ವಸತಿ ಯೋಜನೆಯಿಂದ ಆದಾಯ ಉತ್ಪನ್ನ ಚಟುವಟಿಕೆಗಳಿಗೋಸ್ಕರ 30,000 ಸಹಾಯಧನವನ್ನು ನೀಡಲಾಗುವುದು ಎಂದು ತಿಳಿಸಲಾಗಿದೆ.
ಈ ಮೇಲ್ಕಂಡ ಮಾಹಿತಿ ಯು ಕರ್ನಾಟಕ ರಾಜ್ಯ ಸರ್ಕಾರ ಯೋಜನೆಯಲ್ಲಿ ಬರುತ್ತದೆ ಯೋಜನೆಯ ಸದುಪಯೋಗವನ್ನು ಪಡೆದುಕೊಂಡು. ಎಲ್ಲಾ ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕಾಗಿದೆ ಹಾಗಾಗಿ ಈ ಲೇಖನವನ್ನು ಇತರರಿಗೂ ಹಾಗೂ ನಿಮ್ಮ ಕುಟುಂಬ ವರ್ಗದವರಿಗೂ ತಲುಪಿಸಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು.