ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ರಾಜ್ಯ ಸರ್ಕಾರವು ಘೋಷಣೆ ಮಾಡಿರುವ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ತಿಳಿಸಲಾಗುತ್ತಿದೆ. ಅದರಂತೆ ಗೃಹಲಕ್ಷ್ಮಿ ಯೋಜನೆಯ ಹಣವು ಇನ್ನೂ ಕೂಡ ಯಾರು ಬ್ಯಾಂಕ್ ಖಾತೆಗೂ ಬರದೇ ಇದ್ದರೆ ಆ ಬ್ಯಾಂಕ್ ಖಾತೆಯ ಬದಲಾಗಿ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಖಾತೆಯನ್ನು ತೆರೆಯುವುದರಿಂದ ಒಂದೇ ದಿನದಲ್ಲಿ ಹಣ ಜಮಾ ಆಗುತ್ತದೆ.
ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಖಾತೆ :
ಈ ಹಿಂದೆಯೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮಿ ಯೋಜನೆಯ ಹಣವು ಇನ್ನೂ ಬರದೇ ಇದ್ದರೆ ಆ ಬ್ಯಾಂಕ್ ಖಾತೆಯ ಬದಲಾಗಿ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಖಾತೆಯನ್ನು ತೆರೆಯಿರಿ ಎಂದು ತಿಳಿಸಿದರು. ಅದರಂತೆ ಈಗ ಹೊಸ ಖಾತೆಯನ್ನು ತೆರೆದು ಸಾಕಷ್ಟು ಜನರು ತಮ್ಮ ಖಾತೆಗೆ ಹಣ ಬಂದಿರುವುದರ ಬಗ್ಗೆ ತಿಳಿಸಿದ್ದಾರೆ.
ಬ್ಯಾಂಕ್ ಖಾತೆಗೆ ಕೆವೈಸಿ ಕಡ್ಡಾಯ :
ಈಗಾಗಲೇ ರಾಜ್ಯ ಸರ್ಕಾರವು ಬ್ಯಾಂಕ್ ಖಾತೆಗೆ ಕೆವೈಸಿ ಕಡ್ಡಾಯ ಎಂದು ತಿಳಿಸಿದ್ದರೂ ಸಹ ಅದೆಷ್ಟೋ ಮಹಿಳೆಯರು ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಬ್ಯಾಂಕ್ ಖಾತೆಗೆ ಕೆಲವು ತಾಂತ್ರಿಕ ದೋಷಗಳಿಂದಾಗಿ ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ ಇದರಿಂದಾಗಿ ಸರ್ಕಾರದಿಂದ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಗೆ ಹಣ ಜಮಾ ಆಗಿದ್ದರೂ ಕೂಡ ಅವರ ಬ್ಯಾಂಕ್ ಖಾತೆಗೆ ಮಾತ್ರ ಹಣ ಬಂದು ಸೇರುವುದಿಲ್ಲ ಇದರಿಂದಾಗಿ ಬ್ಯಾಂಕ್ ಖಾತೆಯಲ್ಲಿರುವ ಸಮಸ್ಯೆಗಳನ್ನು ಪರಿಹರಿಸಿಕೊಂಡ ನಂತರ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆ ಮಾಡುವುದರ ಬಗ್ಗೆ ರಾಜ್ಯ ಸರ್ಕಾರ ಈಗಾಗಲೇ ಮಾಹಿತಿ ನೀಡಿತ್ತು.
ಇದನ್ನು ಓದಿ : ನಿಮ್ಮ ಮನೆಗೆ ಸೌರಫಲಕ ಸಿಗಲಿದೆ : ಮಧ್ಯಮ ವರ್ಗದವರೆ ಈ ಕೂಡಲೇ ಅರ್ಜಿ ಸಲ್ಲಿಸಿ
2500 ಕೋಟಿ ರೂಪಾಯಿಗಳು ಬಿಡುಗಡೆ :
ಸುಮಾರು 1.8 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದರಲ್ಲಿ ಪ್ರತಿ ತಿಂಗಳು ರಾಜ್ಯದಲ್ಲಿ ಹಣ ಜಮಾ ಮಾಡಲು ರಾಜ್ಯ ಸರ್ಕಾರವು 2500 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುತ್ತಿದೆ. ಇಷ್ಟಾದರೂ ಸಹ ಲಕ್ಷಾಂತರ ಮಹಿಳೆಯರ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಹಾಗಾಗಿ ಅವರು ಪೋಸ್ಟ್ ಆಫೀಸ್ನಲ್ಲಿ ಖಾತೆ ತೆರೆಯುವಂತೆ ರಾಜ್ಯ ಸರ್ಕಾರವು ತಿಳಿಸಿದೆ. ಇದಕ್ಕಾಗಿ ಮಹಿಳೆಯರು ಅಂಗನವಾಡಿ ಸಹಾಯಕರ ನೆರವನ್ನು ಪಡೆಯಬಹುದು ಎಂದು ತಿಳಿಸಿದೆ.
ಹೀಗೆ ಗೃಹಲಕ್ಷ್ಮಿ ಯೋಜನೆಯ ಹಣವು ಇದುವರೆಗೂ ಯಾರ ಬ್ಯಾಂಕ್ ಖಾತೆಗೆ ಜಮಾ ಆಗಿರುವುದಿಲ್ಲವೋ ಅವರು ಈ ಕೂಡಲೇ ಪೋಸ್ಟ್ ಆಫೀಸ್ನಲ್ಲಿ ಒಂದು ಖಾತೆಯನ್ನು ತೆರೆಯುವುದರ ಮೂಲಕ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗುವಂತೆ ಮಾಡಿಕೊಳ್ಳಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.