ನಮಸ್ಕಾರ ಸ್ನೇಹಿತರೇ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ತನ್ನದೇ ಆದ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡುವುದರ ಮೂಲಕ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದೆ. ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ತಾನು ಘೋಷಣೆ ಮಾಡಿದ ಯೋಜನೆಗಳನ್ನು ಒಂದೊಂದಾಗಿ ಜಾರಿಗೊಳಿಸುತ್ತಿದೆ. ಇವುಗಳು ಸೇರಿದಂತೆ ಸರ್ಕಾರದ ಎಲ್ಲಾ ಯೋಜನೆಗಳ ಮಾಹಿತಿಯನ್ನು ಸಾರ್ವಜನಿಕ ಡಿಜಿಟಲ್ ವೇದಿಕೆಯಲ್ಲಿ ತಿಳಿಯಲು ಅವಕಾಶ ಮಾಡಿಕೊಟ್ಟಿದೆ. ಬಿಜೆಪಿ ಹಾಗೂ ಜೆಡಿಎಸ್ ಗ್ಯಾರಂಟಿ ಯೋಜನೆಗಳ ಮೇಲೆ ವಿಶ್ವಾಸ ನಂಬಿಕೆ ಇಟ್ಟಿರುವ ಕಾಂಗ್ರೆಸ್ ಮತ್ತು ಭರವಸೆಗಳ ವಿರುದ್ಧ ಟೀಕಿಸುತ್ತಲೇ ಇದೆ. ಆದರೆ ತಮ್ಮ ಕೆಲಸಗಳನ್ನು ಕಾಂಗ್ರೆಸ್ ನಾಯಕರು ಸಮರ್ಥಿಸಿಕೊಂಡಿದ್ದಾರೆ ಅದರಂತೆ ಇದೀಗ ರಾಜ್ಯ ಸರ್ಕಾರವು ಒಂದು ಹೆಜ್ಜೆ ಮುಂದೆ ಹೋಗಿ ಎಲ್ಲ ಯೋಜನೆಗಳ ಮಾಹಿತಿಯನ್ನು ಅಂಗೈನಲ್ಲಿಯೇ ಜನರಿಗೆ ಒದಗಿಸಲು ನಿರ್ಧರಿಸಿದೆ.
ಜನರಿಗೆ ಸುಲಭವಾಗಿ ಯೋಜನೆಗಳ ಮಾಹಿತಿ :
ಜನಪರ ಯೋಜನೆಗಳು ಸಾಧನೆಗಳು ಫಲಾನುಭವಿಗಳು ಸಲ್ಲಿಸಬೇಕಾಗಿರುವ ಪ್ರಕ್ರಿಯೆಗಳು ಸಾರ್ವಜನಿಕ ಜಾಗೃತಿಗಳನ್ನು ಒಳಗೊಂಡ ಸರ್ಕಾರದ ಎಲ್ಲಾ ಇಲಾಖೆಗಳಿಗೆ ಸಂಬಂಧಪಟ್ಟಂತೆ ಸಂಪೂರ್ಣ ಮಾಹಿತಿಯನ್ನು ಕರ್ನಾಟಕ ವಾರ್ತೆಯ ಅಧಿಕೃತ ಮೂಲಗಳಿಂದ ತಿಳಿಯಬಹುದಾಗಿದೆ ಎಂದು ಸಿಎಂ ಆಪ್ ಕರ್ನಾಟಕ ಟ್ವಿಟ್ಟರ್ ಎಕ್ಸ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾರ್ವಜನಿಕರನ್ನು ನೇರ ಸಂಪರ್ಕ ಸಾಧಿಸಲು ಸರ್ಕಾರದೊಂದಿಗೆ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಲು ಹಾಗೂ ಫಾಲೋ ಮಾಡಲು ಆಹ್ವಾನಿಸಿದ್ದಾರೆ. ಸರ್ಕಾರದಿಂದ ವಾಟ್ಸಾಪ್ ಚಾನಲ್ ಹಾಗೂ ಇನ್ಸ್ಟಾಗ್ರಾಮ್ ಪೇಜ್ ಗಳ ಮೂಲಕ ಎಲ್ಲಾ ಇಲಾಖೆಗಳ ಯೋಜನೆ ಹಾಗೂ ಪ್ರಕ್ರಿಯೆ ತಿಳಿಯಲು ಸಹಾಯಕವಾಗುತ್ತದೆ.
ಇದನ್ನು ಓದಿ : ಶೀಘ್ರದಲ್ಲೇ ಅಡುಗೆ ಎಣ್ಣೆ ಬೆಲೆಯಲ್ಲಿ ಆಗಲಿದೆಯೇ ಇಳಿಕೆ? ಲೀಟರ್ ಎಣ್ಣೆ ಕೊಳ್ಳಲು ಕ್ಯೂ ನಿಂತ ಮನೆ ಮಂದಿ
ಕರ್ನಾಟಕ ನವ ನಿರ್ಮಾಣಕ್ಕೆ ಗ್ಯಾರಂಟಿ ಸರ್ಕಾರ :
ರಾಜ್ಯ ಸರ್ಕಾರವು ಈ ಲಿಂಕ್ ಮೇಲೆ ಕ್ಲಿಕ್ ಮಾಡಲು ಯೋಜನೆಗಳ ಬಗ್ಗೆ ಮಾಹಿತಿಗೆ ಸಂಬಂಧಿಸಿದಂತೆ ಕರ್ನಾಟಕ ನವ ನಿರ್ಮಾಣಕ್ಕೆ ಗ್ಯಾರಂಟಿ ಸರ್ಕಾರ ಘೋಷ ವಾಕ್ಯದ ಅಡಿಯಲ್ಲಿ ಎಲ್ಲಾ ಇಲಾಖೆಗಳ ಮಾಹಿತಿಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು. ಕರ್ನಾಟಕ ವಾರ್ತಾ ಚಾನೆಲ್ ವಾಟ್ಸಾಪ್ https://whatsapp.com/channel/0029VaCGAbD0gcfO1BkYQo26 ಹಾಗೂ ಕರ್ನಾಟಕ ವಾರ್ತೆ ಇನ್ಸ್ಟಾಗ್ರಾಮ್ ಪೇಜ್ ಆದ https://www.instagram.com/karnatakavarthe/ಇವುಗಳನ್ನು ಫಾಲೋ ಮಾಡುವ ಮೂಲಕ ಸರ್ಕಾರದ ಪ್ರತಿಯೊಂದು ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.
ಹೀಗೆ ರಾಜ್ಯ ಸರ್ಕಾರವು ಜನರಿಗೆ ಸುಲಭವಾಗಿ ಸರ್ಕಾರದ ಎಲ್ಲ ಯೋಜನೆಗಳ ಮಾಹಿತಿಯನ್ನು ತಿಳಿಸುವ ಉದ್ದೇಶದಿಂದ ಒಂದು ಹೆಜ್ಜೆ ಮುಂದೆ ಹೋಗಿ ಅಂಗೈನಲ್ಲಿಯೇ ಜನರು ಸುಲಭವಾಗಿ ತಿಳಿದುಕೊಳ್ಳುವಂತೆ ಮಾಡಬಹುದಾಗಿದೆ. ಹಾಗಾಗಿ ರಾಜ್ಯ ಸರ್ಕಾರದ ಈ ಮಹತ್ವದ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.