ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಒಂದು ಖುಷಿಯ ವಿಷಯವನ್ನು ಈ ಲೇಖನದ ಮೂಲಕ ತಿಳಿಸಲಿದ್ದೇವೆ. ಈ ಲೇಖನದಲ್ಲಿ ನಿಮಗೆ ಉಪಯುಕ್ತವಾದ ಮಾಹಿತಿ ದೊರೆಯಲಿದೆ .ಇನ್ನು ಮುಂದೆ ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಗೃಹಲಕ್ಷ್ಮಿ ಅದಾಲತ್ ನಡೆಯಲಿದೆ ಈ ಗೃಹಲಕ್ಷ್ಮಿ ಇಲ್ಲಿಯವರೆಗೂ ಹಣ ಪಡೆದೆ ಇರುವ ಮಹಿಳೆಯರು ಇಂತಹ ತೊಂದರೆಯನ್ನು ಬಗೆಹರಿಸಲು ಹಾಗೂ ಎಲ್ಲಾ ಮನೆಯ ಯಜಮಾನಿಗೂ ಹಣ ತಲುಪುವಂತೆ ಮಾಡಲು ಈ ವ್ಯವಸ್ಥೆ ಮಾಡಲಾಗಿದೆ .ಇದರ ಬಗ್ಗೆ ಸಂಪೂರ್ಣ ವಿವರವನ್ನು ಈ ಕೆಳಕಂಡ ಲೇಖನದಲ್ಲಿ ತಿಳಿಯೋಣ ಹಾಗಾಗಿ ಸಂಪೂರ್ಣ ಓದಿ.
ನೋಂದಣಿಯಾದವರ ಸಂಖ್ಯೆ:
ಗೃಹಲಕ್ಷ್ಮಿ ಯೋಜನೆಯಲ್ಲಿ ಇಲ್ಲಿಯವರೆಗೂ ನೋಂದಣಿ ಆದವರ ಸಂಖ್ಯೆ 1. 17 ಕೋಟಿ ಮಹಿಳೆಯರು ನೋಂದಣಿಯಾಗಿದ್ದಾರೆ ಅದರಲ್ಲಿ ಇಲ್ಲಿಯವರೆಗೂ 1.10 ಕೋಟಿ ಮಹಿಳೆಯರಿಗೆ ಹಣವು ನೇರವಾಗಿ ಅವರ ಖಾತೆಗೆ ವರ್ಗಾವಣೆ ಮಾಡಲಾಗಿದೆ .ಆದರೆ ಇನ್ನೂ ಎರಡು ಲಕ್ಷ ಮಹಿಳೆಯರಿಗೆ ಕೆಲವು ತೊಂದರೆಗಳಿಂದ ಹಣ ವರ್ಗಾವಣೆ ಆಗಿಲ್ಲ ಈ ತೊಂದರೆಯನ್ನು ಬಗೆಹರಿಸುವ ಸಲುವಾಗಿ ರಾಜ್ಯ ಸರ್ಕಾರವು ಕೆಲವೊಂದು ಮಾಹಿತಿಯನ್ನು ನೀಡಿದೆ. ಅದರ ಪ್ರಕಾರ ಬ್ಯಾಂಕ್ ಖಾತೆಯ ಮಾಹಿತಿ ಮತ್ತು ಬ್ಯಾಂಕ್ ಖಾತೆಗೆ ಆಧಾರ ಕಾರ್ಡ್ ಲಿಂಕ್ ಈ ರೀತಿಯ ತೊಂದರೆಗಳನ್ನು ತೊಂದರೆಯಾಗಿದೆ.
ಅಂಗನವಾಡಿ ಕಾರ್ಯಕರ್ತೆಯರನ್ನು ಬ್ಯಾಂಕಿಗೆ ಕರೆದೊಯ್ದು ಸಮಸ್ಯೆಯನ್ನು ಬಗೆಹರಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ .ಡಿಸೆಂಬರ್ ಒಳಗಾಗಿ ಎಲ್ಲಾ ಮಹಿಳೆಯರು ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಬಗೆಹರಿಸಿಕೊಳ್ಳಲು ಗೃಹಲಕ್ಷ್ಮಿಯರಿಗೆ ಗ್ಯಾರಂಟಿ ಹಣ ತಲುಪಿಸಲು ಸಿದ್ದರಾಮಯ್ಯನವರು ತಿಳಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಸಭೆಯಲ್ಲಿ ಮಾತನಾಡಿದಂತಹ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ಇಂತಹ ಸಮಸ್ಯೆಗಳಿಗೆ ಗೃಹಲಕ್ಷ್ಮಿ ಹಣ ಖಾತೆಗೆ ಬರದೇ ಇದ್ದರೆ ಅಂತಹ ಸಮಸ್ಯೆಯನ್ನು ಗ್ರಾಮ ಮಟ್ಟದಲ್ಲಿ ಸರಿಪಡಿಸಿ ಡಿಸೆಂಬರ್ ಒಳಗಾಗಿ ಅವುಗಳೆಲ್ಲವೂ ಬಗೆಹರಿಸಬೇಕೆಂದು ಸೂಚನೆ ನೀಡಿದ್ದರು. ಈ ಎಲ್ಲಾ ಫಲಾನುಭವಿಗಳಿಗೆ ಮಹಾಲಕ್ಷ್ಮಿ ಹಣವು ಡಿಸೆಂಬರ್ ಒಳಗಾಗಿ ತಲುಪಬೇಕೆಂದು ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.
ಇದನ್ನು ಓದಿ : ಹಣ ಉಳಿತಾಯ ಮಾಡಲು 3 ಸಲಹೆಗಳು : ಜೀವನವೇ ಬದಲಾಗುತ್ತದೆ ನೋಡಿ
ಇದುವರೆಗೂ ಗೃಹಲಕ್ಷ್ಮಿ ಹಣ ಬರದೆ ಇದ್ದವರು ಆಗಸ್ಟ್ 15ರೊಳಗೆ ನೋಂದಣಿ ಮಾಡಿಕೊಂಡವರು ಮೂರು ತಿಂಗಳ ಹಣ ಬಾಕಿ ಇದೆ ಅವರಿಗೆ ಮೂರು ತಿಂಗಳ ಹಣವನ್ನು ಸೇರಿಸಿ ಜಮಾ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ ಮುಂದಿನ ಹದಿನೈದು ದಿನದ ಒಳಗಾಗಿ ಈ ಎಲ್ಲಾ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗುತ್ತೆ ಈ ಕಾರಣಕ್ಕಾಗಿ ಅಧಿಕಾರಿಗಳಿಗೆ ಟ್ರೈನಿಂಗ್ ನೀಡಲಾಗುತ್ತಿದ್ದು .ಇನ್ನು ಕೆಲವೇ ದಿನಗಳಲ್ಲಿ ಈ ಎಲ್ಲಾ ಗೊಂದಲಗಳಿಗೂ ಸ್ಪಷ್ಟ ಮಾಹಿತಿ ಸಿಗಲಿದೆ ಇದರೊಂದಿಗೆ ಕೆಲವು ಮಹಿಳೆಯರಿಗೆ ಹೆಲ್ಪ್ಲೈನ್ ನಂಬರನ್ನು ಸಹ ನೀಡಲಾಗಿದೆ 1902 ಈ ನಂಬರಿಗೆ ಕರೆ ಮಾಡಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ.
ಈ ಮೇಲ್ಕಂಡ ಮಾಹಿತಿಯು ಗೃಹಲಕ್ಷ್ಮಿ ಯೋಜನೆ ಹಣ ಬರದೇ ಇದ್ದಂತಹ ಮಹಿಳೆಯರಿಗೆ ಹೆಚ್ಚು ಅನುಕೂಲಕರವಾಗಲಿದೆ .ಇದ್ದರೆ ಯಾವ ಮಹಿಳೆಗೆ ಹಣ ಬಂದಿಲ್ಲ ಅಂತಹ ಮಹಿಳೆ ಶೀಘ್ರವಾಗಿ ಹಣ ಪಡೆಯಲಿದ್ದಾರೆ.
ಈ ಮೇಲ್ಕಂಡ ಅಗತ್ಯ ಮಾಹಿತಿಯು ನಿಮಗೆ ಉಪಯೋಗಕರವಾಗಲಿದ್ದು .ಈ ಮಾಹಿತಿಯನ್ನು ನಿಮ್ಮ ಕುಟುಂಬ ವರ್ಗದವರಿಗೂ ಹಾಗೂ ಇತರರಿಗೂ ತಲುಪಿಸುವ ಮೂಲಕ ಗೃಹಲಕ್ಷ್ಮಿ ಯೋಜನೆಯ ಹಣ ಅರ್ಹ ಫಲಾನುಭವಿಗಳಿಗೆ ಸೇರಲಿದೆ ಎಂಬ ಮಾಹಿತಿಯನ್ನು ಒದಗಿಸಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು.
ಇತರೆ ವಿಷಯಗಳು :
ಕರ್ನಾಟಕದಲ್ಲಿ ಒಂದು ಕಾರ್ಡ್ ಹಲವು ಉಪಯೋಗಗಳು ಇಲ್ಲಿದೆ ಸಂಪೂರ್ಣ ಮಾಹಿತಿ