rtgh

ಕರ್ನಾಟಕದಲ್ಲಿ ಒಂದು ಕಾರ್ಡ್ ಹಲವು ಉಪಯೋಗಗಳು ಇಲ್ಲಿದೆ ಸಂಪೂರ್ಣ ಮಾಹಿತಿ

ನಮಸ್ಕಾರ ಸ್ನೇಹಿತರೇ .ಕರ್ನಾಟಕ ರಾಜ್ಯ ಸರ್ಕಾರವು ಸಾಮಾನ್ಯ ಜನರಿಗೆ ಉಪಯೋಗವಾಗಲಿ ಎಂದು ಒಂದು ಹೊಸ ಯೋಜನೆಯನ್ನು ಜಾರಿಗೊಳ್ಳುವ ಮೂಲಕ ಅನೇಕ ವರ್ಷಗಳಿಂದ ನಡೆಸಿಕೊಂಡು ಬಂದಿದೆ. ಇದರಿಂದ ಅನೇಕ ಜನರಿಗೆ ಉಪಯೋಗವಾಗಲಿದೆ ಹಾಗಾಗಿ ಈ ಕಾರ್ಡ್ ಪ್ರಯೋಜನಗಳು ಯಾವುವು ಎಂದು ನಾವು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ.

One card has many uses in Karnataka
One card has many uses in Karnataka

ಕಾರ್ಮಿಕ ಕಾರ್ಡ್ ಬಗ್ಗೆ ತಿಳಿಯೋಣ:

ಸರ್ಕಾರವು ಕರ್ನಾಟಕ ರಾಜ್ಯದಲ್ಲಿ ಕಾರ್ಮಿಕ ಕಲ್ಯಾಣವನ್ನು ಸಾಧಿಸುವುದಕ್ಕಾಗಿ ಕರ್ನಾಟಕ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿ ಸ್ಥಾಪನೆ ಮಾಡುವ ಮೂಲಕ ಕಾರ್ಮಿಕ ಮಂಡಳಿಯಿಂದ ನೋಂದಣಿ ಯಾದವರಿಗೆ ವಿವಿಧ ಕ್ಷೇತ್ರದಲ್ಲಿ ದುಡಿಯುತ್ತಿರುವವರಿಗೆ ಅಸಂಘಟಿತ ವಲಯದವರಿಗೆ ಅವರ ಕುಟುಂಬ ಹಾಗೂ ಇತರ ಕ್ಷೇಮಾಭಿವೃದ್ಧಿಗೆ ಕಾರ್ಮಿಕ ಕಲ್ಯಾಣ ಮಂಡಳಿಯು ಸಹಾಯಧನವನ್ನು ನೀಡುವುದರ ಮೂಲಕ ಹಲವು ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ.

ಯೋಜನೆ ಮೂಲಕ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಿ ಅದರ ಪ್ರಯೋಜನವನ್ನು ಪಡೆಯುತ್ತಾರೆ. ಯಾವೆಲ್ಲ ಯೋಜನೆಗಳು ಇದೆ ಸಲು ಯಾವೆಲ್ಲ ದಾಖಲೆಗಳು ಎಂಬುದನ್ನು ನಾವು ಈ ಲೇಖನದಲ್ಲಿ ತಿಳಿಯೋಣ.

ದನ್ನು ಓದಿ : ಹೊಸ ಸುದ್ದಿ : ಕೆಲವರ ರೇಷನ್ ಕಾರ್ಡ್ ರದ್ದು ಮಾಡಲು ಸೂಚನೆ ಅರ್ಹತೆ ಇದ್ದಾರು ರದ್ದು ಆಗುತ್ತೆ ..?

ಯೋಜನೆಯ ವಿವರಗಳು ಹೀಗಿವೆ:

60 ವರ್ಷ ಪೂರೈಸಿದಂತಹ ಕಾರ್ಮಿಕ ಮಂಡಳಿಯಿಂದ ನೋಂದಣಿಯಾದ ಕಾರ್ಮಿಕರಿಗೆ ಪ್ರತಿ ತಿಂಗಳು 3000 ಪಿಂಚಣಿ ದೊರೆಯುತ್ತದೆ. ಈ ಪಿಂಚಣಿ ಪಡೆಯಬೇಕಾದರೆ ಮೂರು ವರ್ಷಗಳನ್ನು ಸಂಪೂರ್ಣವಾಗಿ ಪೂರೈಸಿರಬೇಕು ನೋಂದಣಿದಾರರಾಗಿ.


ಕಾರ್ಮಿಕ ಮಂಡಳಿಯಿಂದ ನೋಂದಣಿಯಾದ ಕಾರ್ಮಿಕರಿಗೆ ಅಪಘಾತ ಏನಾದ್ರೂ ಸಂಭವಿಸಿದರೆ ಪರಿಹಾರವಾಗಿ 2 ಲಕ್ಷ ಸಹಾಯಧನವನ್ನು ನೀಡುತ್ತದೆ ಹಾಗೂ ವೈದ್ಯಕೀಯ ಸಹಾಯಧನ ಪ್ರತಿದಿನ ಗರಿಷ್ಠ 20 ಸಾವಿರ ಸಹಾಯಧನವನ್ನು ಪಡೆಯಬಹುದು .ಕಾರ್ಮಿಕ ಚಿಕಿತ್ಸೆ ಭಾಗ್ಯ ಯೋಜನೆ ಅಡಿ ಕಾರ್ಮಿಕರು ಹಾಗೂ ಕಾರ್ಮಿಕರ ಅವಲಂಬಿತರು ಗಂಭೀರವಾಗಿ ಕಾಯಿಲೆಗಳಿಗೆ ಆದರೆ ಅವರಿಗೆ ಎರಡು ಲಕ್ಷದವರೆಗೂ ಸಹಾಯಧನ ಸಿಗಲಿದೆ.

ಕಾರ್ಮಿಕರ ಮೊದಲ ಮದುವೆಗೆ ಅಥವಾ ಕಾರ್ಮಿಕರ ಅವಲಂಬಿತರ ಮದುವೆಗೆ ಗೃಹಲಕ್ಷ್ಮಿ ಬಾಂಡ್ ಯೋಜನೆಯ ಮೂಲಕ 60,000 ಹಣವನ್ನು ಮದುವೆಗೆ ನೀಡಲಾಗುವುದು.

ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶೈಕ್ಷಣಿಕ ಸಹಾಯಧನವನ್ನು ಸಹ ನೀಡಲಾಗುತ್ತದೆ. ಅದು ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗೂ ಸಹ ಅದರ ಪ್ರಯೋಜನವನ್ನು ಪಡೆದುಕೊಳ್ಳಬಹುದು .ಇದರೊಂದಿಗೆ ವಿದ್ಯಾರ್ಥಿಗಳಿಗೆ ಉಚಿತ ಕಿಟ್ ಹಾಗೂ ಉಚಿತ ಲ್ಯಾಪ್ಟಾಪ್ ಅನ್ನು ನೀಡುವ ಸೌಲಭ್ಯವು ಸಹ ಕಾರ್ಮಿಕ ಇಲಾಖೆ ಮಾಡಿದೆ.

ಕಟ್ಟಡ ಕಾರ್ಮಿಕರ ಮರಣಕ್ಕೀಡಾದಾಗ ಅವರ ಅಂತ್ಯಕ್ರಿಯ ವೆಚ್ಚಹರಿಸಲು 4000 ಹಣವನ್ನು ನೀಡಲಾಗುವುದು . ಕುಟುಂಬಕ್ಕಾಗಿ ಆರ್ಥಿಕ ಸಂಕಷ್ಟವನ್ನು ಎದುರಿಸಲು ಅನುಕೂಲವಾಗಲೆಂದು ಸರ್ಕಾರವು 71,000 ನಾಮಿನಿಗೆ ನೀಡಲಾಗುತ್ತದೆ.

ಕಾರ್ಮಿಕರು ಕೆಲಸ ಮಾಡಲು ಒಂದೂರಿಂದ ಮತ್ತೊಂದು ಊರಿಗೆ ಪ್ರಯಾಣ ಮಾಡಲು ಅವರಿಗೆ ಕರ್ನಾಟಕ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿ ಕಾರ್ಮಿಕ ಕಾರ್ಡನ್ನು ತೋರಿಸುವ ಮೂಲಕ ಉಚಿತ ಬಸ್ ಪಾಸ್ ಕೂಡ ಪಡೆಯಬಹುದು.

ಈ ಮೇಲ್ಕಂಡ ಮಾಹಿತಿಯು ಅನೇಕರಿಗೆ ಉಪಯೋಗಕರವಾಗಲಿದ್ದು ಎಲ್ಲ ಜನರಿಗೂ ತಲುಪಿಸುವ ಮೂಲಕ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲಿ. ಹಾಗಾಗಿ ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ ಕಳುಹಿಸಿ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು.

ಇತರೆ ವಿಷಯಗಳು :

ವಾಟ್ಸಾಪ್ ನಲ್ಲಿ ಒಂದು ಉಪಯುಕ್ತವಾದ ಫೀಚರ್ಸ್ : ಈ ಫೀಚರ್ಸ್ ಅನ್ನು ಬಳಸುವ ವಿಧಾನ ಇಲ್ಲಿದೆ

ಸಿಬಿಲ್ ಸ್ಕೋರನ್ನು ಜಾಸ್ತಿ ಮಾಡುವ ಟ್ರಿಕ್ಸ್ ಇಲ್ಲಿದೆ : ಸಾಲಕ್ಕೆ ಅರ್ಜಿ ಹಾಕುವಾಗ ಇದನ್ನು ಬಳಸಿ

Leave a Comment